ಅದು ಟಿ-20 ಪೂರ್ವದ ಕ್ರಿಕೆಟ್ ಕಾಲಘಟ್ಟ. ಏಕದಿನ ಕ್ರಿಕೆಟ್ ಎಂದರೆ ಭಾರೀ ಆಸಕ್ತಿಯಿಂದ ಇಡೀ ದೇಶವೇ ದಿನವೆಲ್ಲಾ ನೋಡುತ್ತಿದ್ದ ಕಾಲ. ವೇದಿಕೆ ಯಾವುದಪ್ಪಾ ಅಂದ್ರೆ 1999ರ ಏಕದಿನ ವಿಶ್ವಕಪ್.
ಆಗ ತಾನೇ ಭಾರತದ ಭರವಸೆಯ ಬ್ಯಾಟ್ಸ್‌ಮನ್‌ಗಳಾಗಿ ಮಿಂಚಿ ಹೆಸರು ಮಾಡಿದ್ದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಮೇ 26, 1999ರಂದು ಹಾಲಿ ಚಾಂಪಿಯನ್ ಶ್ರೀಲಂಕಾದ ಟಾಪ್ ಕ್ಲಾಸ್ ಬೌಲಿಂಗ್‌ಅನ್ನು ಮನಸೋಯಿಚ್ಛೆ ದಂಡಿಸಿ ಏಕದಿನ ಕ್ರಿಕೆಟ್ ಇತಿಹಾಸದ ಮೊದಲ 300+ ಜೊತೆಯಾಟವಾಡಿದ್ದರು.
ಆನ್ಲೈನ್ ನಲ್ಲಿ ಸುಂದರ ಡ್ರೆಸ್ ನೋಡಿ ಆರ್ಡರ್ ಮಾಡಿದ ಹುಡುಗಿಗೆ ಕಾದಿತ್ತು ಶಾಕ್
ಕೇವಲ 44.5 ಓವರುಗಳಲ್ಲಿ 318 ರನ್‌ಗಳ ಜೊತೆಯಾಟವಾಡಿದ ಗಂಗೂಲಿ ಹಾಗೂ ದ್ರಾವಿಡ್ ಈ ಪಂದ್ಯದಲ್ಲಿ ಭಾರತ ಅಂದಿನ ಮಟ್ಟಿಗೆ ಏಕದಿನ ಪಂದ್ಯಗಳಲ್ಲಿ ತನ್ನ ಅತ್ಯಧಿಕ ಸ್ಕೋರ್ ಆದ 373 ರನ್ ಕಲೆ ಹಾಕಲು ನೆರವಾಯಿತು. ಈ ಬೃಹತ್ ಮೊತ್ತದ ಬೆನ್ನಿಗೆ ಸಿಂಹಳೀಯರನ್ನು 216 ರನ್ನುಗಳಿಗೆ ಕಟ್ಟಿಹಾಕಿದ ಭಾರತ, ಪಂದ್ಯದಲ್ಲಿ 157 ರನ್‌ಗಳ ಭಾರೀ ಗೆಲುವು ಸಾಧಿಸಿತ್ತು.
ಇಂಗ್ಲೆಂಡ್‌ನ ಟಾಂಟನ್‌ನಲ್ಲಿ ನಡೆದ ವಿಶ್ವಕಪ್ ಪ್ರಾಥಮಿಕ ಹಂತದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ಅರ್ಜುನ ರಣತುಂಗಾ, ಮುಂಜಾವಿನ ಮಂಜಿನ ಲೆಕ್ಕಾಚಾರ ಮಾಡಿಕೊಂಡು ಬೌಲಿಂಗ್ ಆಯ್ದುಕೊಂಡರು. ಅವರ ನಿರ್ಧಾರ ಸಮರ್ಥಿಸುವಂತೆ ಶಿಸ್ತುಬದ್ಧ ಬೌಲಿಂಗ್ ಮಾಡಿದ ಲಂಕಾ ವೇಗಿ ಚಮಿಂದಾ ವಾಸ್ ಮೊದಲ ಓವರ್‌ನಲ್ಲೇ ಆರಂಭಿಕ ಸಡಗೋಪನ್ ರಮೇಶ್‌ರನ್ನು ಪೆವಿಲಿಯನ್‌ಗಟ್ಟಿ ಆ ಪಂದ್ಯದಲ್ಲಿ 4-5 ವಿಕೆಟ್ ತೆಗೆಯುವವರಂತೆ ಕಂಡರು.
ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಜುಲೈನಿಂದ ಹೆಚ್ಚಾಗಲಿದೆ ಸಂಬಳ
ಆದರೆ ಮುಂದೆ ಆಗಿದ್ದೇ ಬೇರೆ. ಕೂಟದ ಹಿಂದಿನ ಪಂದ್ಯದಲ್ಲಿ ಕೆನ್ಯಾ ವಿರುದ್ಧ ಅಜೇಯ ಶತಕ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧ ಶತಕ ಬಾರಿಸಿ ಭಾರೀ ಲಯದಲ್ಲಿದ್ದ ರಾಹುಲ್ ದ್ರಾವಿಡ್ ಮೂರನೇ ಕ್ರಮಾಂಕದಲ್ಲಿ ಬಂದವರೇ ಭಾರೀ ಸಲೀಸಾದ ಪಾದಚಲನೆಯೊಂದಿಗೆ ಶಾಟ್‌ಗಳನ್ನು ಬ್ಯಾಟ್‌ನಿಂದ ಮಿಡಲ್ ಮಾಡಲು ಆರಂಭಿಸಿಬಿಟ್ಟರು. ಗಂಗೂಲಿ ಜೊತೆಗೂಡಿದ ದ್ರಾವಿಡ್ ಪಂದ್ಯದ ಆರಂಭದ ಓವರುಗಳಲ್ಲಿ ಖುದ್ದು ತಾವೇ ಆಕ್ರಮಣಕಾರೀ ಆಟದ ಹೊಣೆ ನಿಭಾಯಿಸಲು ಆರಂಭಿಸಿ ಸರಾಗವಾಗಿ ಡ್ರೈವ್, ಕಟ್ ಹಾಗೂ ಪುಲ್ ಶಾಟ್‌ಗಳನ್ನು ಪ್ರಯೋಗ ಮಾಡತೊಡಗಿದರು. ಪರಿಣಾಮ ಬಾಲಿಗೊಂದು ರನ್‌ನಂತೆ ಶತಕ ಬಾರಿಸಿಬಿಟ್ಟರು ದ್ರಾವಿಡ್. 119 ಎಸೆತಗಳಲ್ಲಿ 145 ರನ್‌ಗಳಿಸಿದ ದ್ರಾವಿಡ್‌ರ ಈ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 1 ಸಿಕ್ಸ್ ಕೂಡಿದ್ದವು.
ಮತ್ತೊಂದೆಡೆಯಲ್ಲಿ ತಳವೂರುವವರೆಗೂ ನಿಧಾನವಾಗಿ ಆಡಿದ ಗಂಗೂಲಿ 119 ಎಸೆತಗಳಲ್ಲಿ ತಮ್ಮ ಶತಕವನ್ನೂ ಪೂರೈಸಿಕೊಂಡರು. ಮುಂದಿನ 39 ಎಸೆತಗಳಲ್ಲಿ 83 ಚಚ್ಚಿದ ಸೌರವ್ ಗಂಗೂಲಿ, ಎದುರಾಳಿ ಬೌಲಿಂಗ್ ದಾಳಿಯನ್ನು ಅಕ್ಷರಶಃ ಧೂಳೀಪಟ ಮಾಡಿದ್ದರು. ಮುತ್ತಯ್ಯ ಮುರಳೀಧರನ್ ಸಹ ತಮ್ಮ ಖಾತೆಯ 10 ಓವರುಗಳಲ್ಲಿ 60 ರನ್ನಿತ್ತು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ವಾಸ್ 10 ಓವರ್‌ಗಳಲ್ಲಿ 84 ಕೊಡಬೇಕಾಗಿ ಬಂದರೆ ಜಯಸೂರ್ಯ ಹಾಕಿದ ಮೂರೇ ಓವರ್‌ಗಳಲ್ಲಿ 37 ರನ್ ಕೊಟ್ಟರು. ಈ ಮಟ್ಟದಲ್ಲಿತ್ತು ಟೀಂ-ಇಂಡಿಯಾದ ಭವಿಷ್ಯದ ಇಬ್ಬರು ನಾಯಕರ ಆಟದ ಪರಿ.
ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕಣ್ಣಿನ ದೃಷ್ಟಿ ವಾಪಸ್
ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿತಾದರೂ, ಪ್ರಾಥಮಿಕ ಹಂತದ ಪಂದ್ಯವೊಂದರಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಂಡಿದ್ದ ಕಾರಣ ಸೆಮಿ ಫೈನಲ್ ಪ್ರವೇಶ ಮಾಡಲು ಭಾರೀ ಕಷ್ಟವಿತ್ತು. ಸೂಪರ್ ಸಿಕ್ಸ್ ಹಂತದ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಿದ್ದ ಭಾರತ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ನಿರಾಶಾದಾಯವಾಗಿ ಹೊರಬಿತ್ತು.
ಕಾರ್ಗಿಲ್ ಯುದ್ಧದ ಕಾರ್ಮೋಡದ ನಡುವೆಯೇ ಸೂಪರ್ ಸಿಕ್ಸ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಮೋಘವಾಗಿ 47 ರನ್‌ಗಳ ಜಯ ಸಾಧಿಸಿದ್ದೇ ದೇಶವಾಸಿಗಳಿಗೆ ಭಾರೀ ಖುಷಿ ಕೊಟ್ಟ ವಿಚಾರವಾಯಿತು.
https://www.youtube.com/watch?v=8FW62x4hq88
https://www.instagram.com/tv/CPUuoPjBNSH/?utm_source=ig_web_copy_link