alex Certify ಕೊನೆಗೂ ತರಬೇತಿಗೆ ಮೈದಾನಕ್ಕಿಳಿದ ಧೋನಿ ಟೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ತರಬೇತಿಗೆ ಮೈದಾನಕ್ಕಿಳಿದ ಧೋನಿ ಟೀಂ

CSK share MS Dhoni's first look from UAE.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಅಭ್ಯಾಸ ಶುರು ಮಾಡಿದ್ದಾರೆ. ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19 ರಿಂದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.

ಕ್ವಾರಂಟೈನ್ ಸಮಯ ಮುಗಿದ ನಂತ್ರ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಮತ್ತು ಎಂ.ಎಸ್. ಧೋನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿಎಸ್ಕೆ ತನ್ನ ಇನ್ಟಾಗ್ರಾಮ್ ನಲ್ಲಿ ಇಬ್ಬರ ಫೋಟೋಗಳನ್ನು ಹಂಚಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ ಎಲ್ಲಾ ತಂಡಗಳು ಈಗಾಗಲೇ ತರಬೇತಿಯನ್ನು ಪ್ರಾರಂಭಿಸಿವೆ. ಸಿಎಸ್ಕೆ ಯ 13 ಸದಸ್ಯರಿಗೆ ಕೊರೊನಾ ಬಂದ ಕಾರಣ ತರಬೇತಿ ಶುರುವಾಗಿರಲಿಲ್ಲ. ಸಿಎಸ್ಕೆ ಆಟಗಾರರಿಗೆ ಮೂರು ಬಾರಿ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈಗ ಎಲ್ಲ ಆಟಗಾರರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...