alex Certify ಐಪಿಎಲ್ ಪಂದ್ಯಕ್ಕೆ ದುಬೈ ಫೆವರೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಪಂದ್ಯಕ್ಕೆ ದುಬೈ ಫೆವರೆಟ್

ಕೊರೊನಾ ಮಧ್ಯೆಯೇ ಐಪಿಎಲ್ ಪಂದ್ಯವನ್ನು ಆಯೋಜಿಸಲಾಗಿದೆ. ಈ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 19ರಿಂದ ಪಂದ್ಯ ಶುರುವಾಗಲಿದೆ.

ಈ ಬಾರಿ ಯುಎಇಯ ಮೂರು ಕಡೆ ಪಂದ್ಯ ನಡೆಯಲಿದೆ. ಅಬುಧಾಬಿ ಮತ್ತು ಶಾರ್ಜಾಗಿಂತ ದುಬೈ ಐಪಿಎಲ್ ಗೆ ಫೆವರೆಟ್ ಆಗಿದೆ. ದುಬೈನಲ್ಲಿ ಐಪಿಎಲ್ ನ 24 ಪಂದ್ಯಗಳು ನಡೆಯಲಿವೆ. ಅಬುಧಾಬಿಯಲ್ಲಿ 20 ಪಂದ್ಯಗಳು ನಡೆಯಲಿವೆ. ಶಾರ್ಜಾದಲ್ಲಿ ಕನಿಷ್ಠ 12 ಪಂದ್ಯಗಳು ನಡೆಯಲಿವೆ. ಬಿಸಿಸಿಐ ಪ್ಲೇಆಫ್ ಮತ್ತು ಫೈನಲ್ ಪಂದ್ಯದ ಸ್ಥಳವನ್ನು ಘೋಷಿಸಿಲ್ಲ. ಈ ಪಂದ್ಯಗಳು ನಡೆಯುವ ಮೈದಾನ ಹಾಗೂ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿದೆ.

ಅಬುಧಾಬಿಯಲ್ಲಿ ಮೊದಲ ಪಂದ್ಯ ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಇಲ್ಲಿಯವರೆಗೆ ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ಕೊನೆಯ ಲೀಗ್ ಪಂದ್ಯ ಅಬುಧಾಬಿಯಲ್ಲಿ, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನವೆಂಬರ್ 2 ರಂದು ನಡೆಯಲಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...