ಐಪಿಎಲ್ ನಲ್ಲಿ 3ಬಾರಿ ಟ್ರೋಫಿ ಎತ್ತಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಗೆ ಉಳಿಸಿಕೊಂಡ ಹಾಗೂ ಕೈಬಿಟ್ಟಿರುವ ಆಟಗಾರರ ಪ್ರಕಟಣೆ ಮಾಡಿದ್ದು ಸಿಎಸ್ ಕೆ ಫ್ರಾಂಚೈಸಿ 6 ಆಟಗಾರರನ್ನು ಕೈಬಿಟ್ಟು, ಸುರೇಶ್ ರೈನಾಗೆ ಮತ್ತೊಂದು ಅವಕಾಶ ನೀಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ.
ಎಂಎಸ್ ಧೋನಿ, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಅಂಬಟಿ ರಾಯುಡು, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮ, ಇಮ್ರಾನ್ ತಾಹಿರ್, ದೀಪಕ್ ಚಹರ್, ಋತುರಾಜ್ ಗಾಯಕ್ವಾಡ್, ಲುಂಗಿ ಎನ್ ಗಿಡಿ, ಜಗದೀಶನ್, ಹಝೆಲ್ ವುಡ್, ಸಾಯ್ ಕಿಶೋರ್ ಹಾಗೂ ಕೆಎಂ ಆಸಿಫ್.
ಸಿ.ಎಸ್.ಕೆ. ಕೈ ಬಿಟ್ಟ ಆಟಗಾರರು.
ಕೇದಾರ್ ಜಾಧವ್, ಮುರಳಿ ವಿಜಯ್, ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್, ಶೇನ್ ವಾಟ್ಸನ್ (ವಿದಾಯ), ಮೋನು ಕುಮಾರ್ ಸಿಂಗ್.