ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ʼಮೊದಲನೇ ಶತಕʼ ಸಿಡಿಸಿದ ದಿನ 2005 ಏಪ್ರಿಲ್ 5ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಎಂ ಎಸ್ ಧೋನಿ 123 ಎಸೆತಗಳಲ್ಲಿ 148ರನ್ ಗಳ ಭರ್ಜರಿ ಶತಕ ಸಿಡಿಸಿದ್ದರು,
ಇವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಗಳಿದ್ದವು. ಇಂದಿಗೆ 16 ವರ್ಷಗಳು ಕಳೆದಿವೆ ಇಂದು ಧೋನಿ ಜೀವನದ ಮರೆಯಲಾಗದ ದಿನ ಎಂದರೆ ತಪ್ಪಾಗಲಾರದು ಈ ಪಂದ್ಯದಿಂದ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು.
ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ವೃದ್ಧ: ಸಿನಿಮೀಯ ರೀತಿಯಲ್ಲಿ ನಡೀತು ರಕ್ಷಣಾ ಕಾರ್ಯ..!
ಭಾರತ ತಂಡ ಈ ಪಂದ್ಯದಲ್ಲಿ ಒಟ್ಟಾರೆ 356ರನ್ ಗಳ ಗುರಿ ನೀಡಿತ್ತು ಪಾಕಿಸ್ತಾನ ತಂಡ 298ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸೋಲನುಭವಿಸಿತ್ತು ಈ ಪಂದ್ಯದ ಮೂಲಕ ಎಂ ಎಸ್ ಧೋನಿ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು ಈ ಸಂತಸದ ದಿನವನ್ನು ಎಂ ಎಸ್ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
https://www.instagram.com/p/CNRtyKhhzcB/?igshid=1cz0ekcm3ivpl