alex Certify ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ವೃದ್ಧ: ಸಿನಿಮೀಯ ರೀತಿಯಲ್ಲಿ ನಡೀತು ರಕ್ಷಣಾ ಕಾರ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ ವೃದ್ಧ: ಸಿನಿಮೀಯ ರೀತಿಯಲ್ಲಿ ನಡೀತು ರಕ್ಷಣಾ ಕಾರ್ಯ..!

ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿದ್ದ ವೃದ್ಧನನ್ನ ರಕ್ಷಿಸುವ ಮೂಲಕ ರೈಲ್ವೆ ಅಧಿಕಾರಿಯೊಬ್ಬರು ಸಮಯಪ್ರಜ್ಞೆ ಮೆರೆದ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ ನಿಲ್ದಾಣದಲ್ಲಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ವೃದ್ಧನನ್ನ ಕಾಪಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದ ಆರಂಭದಲ್ಲಿ ರೈಲ್ವೆ ಅಧಿಕಾರಿ ಫ್ಲಾಟ್​​ಫಾರಂನ ಅಂಚಿನಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿರೋದನ್ನ ಕಾಣಬಹುದಾಗಿದೆ. ಈ ವೇಳೆಯಲ್ಲಿ ರೈಲು ಕೂಡ ನಿಧಾನವಾಗಿ ನಿಲ್ದಾಣದಿಂದ ಹೊರಡುತ್ತಿತ್ತು.

ಕೆಲವೇ ಸೆಕೆಂಡ್​​ಗಳಲ್ಲಿ ವೃದ್ಧ ವ್ಯಕ್ತಿಯನ್ನ ರೈಲು ಎಳೆದುಕೊಂಡು ಬಂದಿದ್ದು ವೇಗವಾಗಿ ಓಡಿ ಬಂದ ರೈಲ್ವೆ ಅಧಿಕಾರಿ ವೃದ್ಧನನ್ನ ರೈಲಿನಿಂದ ಎಳೆದುಕೊಂಡಿದ್ದಾರೆ. ಕೆಲಕಾಲ ನಿಲ್ದಾಣದಲ್ಲೇ ಮಲಗಿದ್ದ ವೃದ್ಧ ಅಲ್ಲಿಂದ ಎದ್ದು ನಡೆದುಕೊಂಡು ಹೋಗಿದ್ದಾರೆ. ಈ ವಿಡಿಯೋದ ತುಣುಕನ್ನ ಟ್ವಿಟರ್​ನಲ್ಲಿ ಕೇಂದ್ರ ಸಚಿವ ಪಿಯೂಷ್​ ಗೋಯೆಲ್​ ಶೇರ್​ ಮಾಡಿದ್ದಾರೆ. ಕರ್ತವ್ಯನಿಷ್ಠೆ ಮೆರೆಯುತ್ತಿರುವ ಭದ್ರತಾ ಸಿಬ್ಬಂದಿಯ ಸೇವೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...