alex Certify ಆಸ್ಟ್ರೇಲಿಯಾ ಆಟಗಾರ್ತಿಯೊಂದಿಗೆ ಡಿನ್ನರ್‌ ಗೆ ಹೋಗಲು ಟೀಂ ಇಂಡಿಯಾ ಆಟಗಾರ ರೆಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ಆಟಗಾರ್ತಿಯೊಂದಿಗೆ ಡಿನ್ನರ್‌ ಗೆ ಹೋಗಲು ಟೀಂ ಇಂಡಿಯಾ ಆಟಗಾರ ರೆಡಿ..!

ಲಾಕ್‌ ಡೌನ್‌ನಿಂದಾಗಿ ಸಾಮಾನ್ಯ ಜನರಷ್ಟೇ ಅಲ್ಲದೆ ಸೆಲೆಬ್ರಿಟಿಗಳೂ ಮನೆಯಲ್ಲಿ ಇದ್ದು ಮನೆ ಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸದಾ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗುತ್ತಿದ್ದ ಆಟಗಾರರು, ಸಿನಿಮಾ ನಟರು ಇದೀಗ ಮನೆಯೇ ಮಂತ್ರಾಲಯ ಎನ್ನುತ್ತಿದ್ದಾರೆ. ಲಾಕ್‌ ಡೌನ್‌ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಕೂಡ ಆಗಿದ್ದಾರೆ ಈ ಸೆಲೆಬ್ರಿಟಿಗಳು.

ಇನ್ಸ್ಟಾಗ್ರಾಮ್ ಲೈವ್, ಫೇಸ್‌ಬುಕ್ ಲೈವ್ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಮೊನ್ನೆಯಷ್ಟೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಮುರಳಿ ವಿಜಯ್ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದರು. ಈ ಲೈವ್‌ನಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡರು.

ಹಾಗೆಯೇ ಡಿನ್ನರ್ ವಿಚಾರವಾಗಿ ವಿಜಯ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ನೀವು ಯಾವ ಇಬ್ಬರು ವ್ಯಕ್ತಿಗಳ ಜೊತೆಗೆ ಡಿನ್ನರ್ ಹೋಗಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಮುರಳಿ ವಿಜಯ್, ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಎಲೀಸ್ ಪೆರ್ರಿ ಹಾಗೂ ಭಾರತ ತಂಡದ ಶಿಖರ್ ಧವನ್ ಜೊತೆ ಎಂದು ಹೇಳಿದ್ದರು.

ಇದಾದ ನಂತರ ಮುರುಳಿ ವಿಜಯ್ ಅವರ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಎಲೀಸ್ ಪೆರ್ರಿ ಅವರ ಜೊತೆ ಡಿನ್ನರ್ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...