alex Certify ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಮೊಹಮ್ಮದ್ ಶಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಮೊಹಮ್ಮದ್ ಶಮಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತಮ್ಮ ಆಟದ ಮೂಲಕವೇ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಈ ಅದ್ಭುತ ಆಟಗಾರನ ಬಗ್ಗೆ ಇದೀಗ ಮತ್ತೊಂದು ಆಘಾತಕಾರಿ ವಿಚಾರ ಹೊರ ಬಿದ್ದಿದೆ.

ಹೌದು, ಮೊಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರಂತೆ. 2018 ರಲ್ಲಿ ಶಮಿ ಸಾಯುವ ದಾರಿ ಹಿಡಿದಿದ್ದರಂತೆ. ತಮ್ಮ ಪತ್ನಿ ಅವರ ಮೇಲೆ ಮಾಡಿದ್ದ ಆರೋಪ ಹಾಗೂ ಅವರಿಗೆ ಆದ ಮಾನಸಿಕ ಕಿರುಕುಳದಿಂದಾಗಿ ಕುಗ್ಗಿ ಹೋಗಿದ್ದ ಶಮಿಗೆ ಮುಂದಿನ ದಾರಿ ಎಂದು ಕಂಡಿದ್ದು ಆತ್ಮಹತ್ಯೆಯಂತೆ. ಇದನ್ನು ಸ್ವತಃ ಶಮಿನೇ ಹೇಳಿದ್ದಾರೆ.

ಇನ್ನು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಮಿಗೆ ಮತ್ತೆ ಕೈಹಿಡಿದು ಮೇಲೆತ್ತಿದ್ದು ಅವರ ಪೋಷಕರು ಹಾಗೂ ಕುಟಂಬಸ್ಥರಂತೆ. ಅವರ ಸಹಾಯದಿಂದಲೇ ಮತ್ತೆ ನಾನು ಕ್ರಿಕೆಟ್ ಆಡಲು ಸಾಧ್ಯವಾಯಿತು ಎಂದು ರೋಹಿತ್ ಶರ್ಮಾ ಜೊತೆಗಿನ ಇನ್‌ಸ್ಟಾಗ್ರಾಂ ಜೊತೆಗಿನ ಸಂವಾದದಲ್ಲಿ ಮೊಹಮ್ಮದ್ ಶಮಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...