HomeLatest Newsಆರೋಗ್ಯಕರ ಪಾಲಕ್ ಸೊಪ್ಪಿನ ವಡೆ: ಅತಿಥಿಗಳಿಗೆ ಬಡಿಸಲು ಸೂಕ್ತ ತಿಂಡಿ

ಆರೋಗ್ಯಕರ ಪಾಲಕ್ ಸೊಪ್ಪಿನ ವಡೆ: ಅತಿಥಿಗಳಿಗೆ ಬಡಿಸಲು ಸೂಕ್ತ ತಿಂಡಿ

ಸಂಜೆಯ ಚಹಾ ಸಮಯಕ್ಕೆ ಬಿಸಿಬಿಸಿಯಾದ ಹಾಗೂ ಗರಿಗರಿಯಾದ ತಿಂಡಿ ಸವಿಯಲು ಇಷ್ಟಪಡುವವರಿಗೆ ಪಾಲಕ್ ಬೇಳೆ ವಡೆ ಉತ್ತಮ ಆಯ್ಕೆಯಾಗಿದೆ. ಕಡಲೆಬೇಳೆ ಹಾಗೂ ತಾಜಾ ಪಾಲಕ್ ಸೊಪ್ಪಿನ ಸಂಯೋಜನೆಯಿಂದ ತಯಾರಾಗುವ ಈ ವಡೆ ರುಚಿಯ ಜೊತೆಗೆ ಆರೋಗ್ಯಕ್ಕೂ ಅತ್ಯುತ್ತಮ.

ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್ ಕಡಲೆಬೇಳೆ, ಎರಡು ಚಮಚ ತೊಗರಿಬೇಳೆ, ಒಂದು ಚಮಚ ಅಕ್ಕಿ, ಒಂದು ಕಪ್ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಎರಡು ಹಸಿಮೆಣಸಿನಕಾಯಿ, ಒಂದು ಇಂಚು ಶುಂಠಿ, ಒಂದು ಚಮಚ ಸೋಂಪು, ಒಂದು ಚಿಟಿಕೆ ಇಂಗು, ಕರಿಯಲು ಅಗತ್ಯವಿರುವಷ್ಟು ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಮೊದಲಿಗೆ ಕಡಲೆಬೇಳೆ ಹಾಗೂ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ನೀರು ಹಾಕಿ ಸುಮಾರು ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ನೀರನ್ನು ಸಂಪೂರ್ಣವಾಗಿ ಸೋಸಿ ಬೇಳೆಯನ್ನು ಮತ್ತೊಂದು ಗಂಟೆ ಒಣಗಲು ಬಿಡಿ.

ಈಗ ನೆನೆಸಿದ ಬೇಳೆಯ ಮೂರನೇ ಒಂದು ಭಾಗವನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ, ಶುಂಠಿ, ಸೋಂಪು, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ವರ್ಗಾಯಿಸಿ. ಉಳಿದ ಬೇಳೆಯನ್ನು ಸಹ ನೀರು ಸೇರಿಸದೇ ತರಿತರಿಯಾಗಿ ರುಬ್ಬಿ, ಮೊದಲೇ ರುಬ್ಬಿದ ಮಿಶ್ರಣಕ್ಕೆ ಸೇರಿಸಿ.

ನಂತರ ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಕರಿಬೇವು ಹಾಗೂ ಇಂಗು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಕೈಗಳನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿಕೊಂಡು, ತಯಾರಿಸಿದ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ವಡೆಯ ಆಕಾರಕ್ಕೆ ತಟ್ಟಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಉರಿಯನ್ನು ಮಧ್ಯಮ ಪ್ರಮಾಣದಲ್ಲಿಟ್ಟು ವಡೆಗಳನ್ನು ಎಣ್ಣೆಗೆ ಹಾಕಿ. ವಡೆಗಳು ಎರಡೂ ಬದಿ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಕರಿಯಿರಿ.

ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲಿಟ್ಟು, ಬಿಸಿಯಾಗಿದ್ದಾಗಲೇ ಚಹಾ ಅಥವಾ ಚಟ್ನಿ ಜೊತೆ ಸವಿಯಲು ನೀಡಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular