HomeKarnatakaರಾಜ್ಯದ 6-9 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್’ನ್ಯೂಸ್; ₹6,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ

ರಾಜ್ಯದ 6-9 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್’ನ್ಯೂಸ್; ₹6,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆಯು 2026-27 ನೇ ಸಾಲಿನ 6 ರಿಂದ 9 ನೇ ತರಗತಿಯ ಮಕ್ಕಳಿಗೆ ದೀನ ದಯಾಳ್ ಸ್ಪರ್ಶ ಯೋಜನಾ ಎಂಬ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

 ಅಭ್ಯರ್ಥಿಯು 6 ರಿಂದ 9 ನೇ ತರಗತಿಯ ವಿದ್ಯಾರ್ಥಿಯಾಗಿರಬೇಕು. ಅಭ್ಯರ್ಥಿಯ ಶಾಲೆಯು ಫಿಲಾಟಲಿ ಕ್ಲಬ್ ಹೊಂದಿರಬೇಕು ಮತ್ತು ವಿದ್ಯಾರ್ಥಿಯು ಅದರ ಸದಸ್ಯತ್ವವನ್ನು ಹೊಂದಿರಬೇಕು ಅಥವಾ ಶಾಲೆಯಲ್ಲಿ ಫಿಲಾಟಲಿ ಕ್ಲಬ್ ಇರದಿದ್ದರೆ, ವಿದ್ಯಾರ್ಥಿಯು ಅವರ ಸ್ವಂತ ಅಂಚೆ ಚೀಟಿ ಸಂಗ್ರಹ ಖಾತೆಯನ್ನು ಕಡ್ಡಾಯವಾಗಿ ತೆರೆಯಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈವಿಷಯದ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಬೇಕು.

 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕನಿಷ್ಠ ಶೇ. 60 ಅಂಕವನ್ನು ಪಡೆದಿರಬೇಕು. Sಅ/Sಖಿ ಅವರಿಗೆ ಶೇ. 5 ವಿನಾಯಿತಿ ಇದೆ. ಅರ್ಜಿಗಳನ್ನು ಸ್ಪೀಡ್ ಪೆÇೀಸ್ಟ್ ನಲ್ಲಿ ಹಿರಿಯ ಅ0ಚೆ ಅಧೀಕ್ಷಕರ ಕಾರ್ಯಾಲಯ, ಧಾರವಾಡ ವಿಭಾಗ, ಧಾರವಾಡ – 580008 ಈ ವಿಳಾಸಕ್ಕೆ ಕಳುಹಿಸಬೇಕು. ಲಕೋಟೆಯ ಮೇಲೆ “Application for stage-1 Deen Dayal SPARSH Quiz competition” ಎಂಬ ಮೇಲ್ಬರಹವಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 2025-26 ನೇ ಸಾಲಿನ ಪ್ರಗತಿ ಪತ್ರದ ಧೃಡಿಕೃತ ಪ್ರತಿ, 2 ಪಾಸ್ಪೋರ್ಟ್ ಸೈಜಿನ ಭಾವಚಿತ್ರ, ಒಂದನ್ನು ಅರ್ಜಿಗೆ ಅಂಟಿಸಬೇಕು ಮತ್ತು ಇದನ್ನು ಶಾಲೆಯ ಮುಖ್ಯೋಪಾಧ್ಯಾಯರು ಧೃಢೀಕರಿಸಿರಬೇಕು. ಇನ್ನೊಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. ಅರ್ಜಿಯಲ್ಲಿ ಮೊಬೈಲ್ ನಂಬರ್ ಮತ್ತು ಇ ಮೇಲ್ ವಿಳಾಸವನ್ನು ಕಡ್ಡಾಯವಾಗಿ ಬರೆದಿರಬೇಕು.

ಪರಿಕ್ಷೆಯನ್ನು 2 ಹಂತಗಳಲ್ಲಿ ನಡೆಸಲಾಗುವುದು. ಫಿಲಾಟಲಿ ಬಹು ಆಯ್ಕೆ ಲಿಖಿತ ಪರೀಕ್ಷೆ: ಈ ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನ, ಇತಿಹಾಸ, ವಿಜ್ಞಾನ, ಕ್ರೀಡೆ, ಸಂಸ್ಕøತಿ, ಭೂಗೋಳ ಮತ್ತು ಅಂಚೆ ಚೀಟಿ ಸಂಗ್ರಹದ ಮೇಲೆ 50 ಪ್ರಶ್ನೆಗಳಿರುತ್ತವೆ.

ಅಂಚೆ ಚೀಟಿ ಸಂಗ್ರಹ: ಮೊದಲ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಾಜೆಕ್ಟ್‌ ಅನ್ನು ಒಪ್ಪಿಸಬೇಕು. ಇದು 4 ರಿಂದ 5 ಪುಟಗಳನ್ನು ಮೀರಬಾರದು. ಪ್ರಾಜೆಕ್ಟ್‌ನಲ್ಲಿ 16 ಕ್ಕಿಂತ ಹೆಚ್ಚು ಅಂಚೆ ಚೀಟಿಗಳನ್ನು ಹಾಗೂ 500 ಕ್ಕಿಂತ ಹೆಚ್ಚು ಶಬ್ದಗಳನ್ನು ಬಳಸಬಾರದು. ಇದರ ವಿಸ್ತೃತ ಮಾಹಿತಿ ಮತ್ತು ಮಾದರಿ ಪ್ರಾಜೆಕ್ಟ್‌ www.karnatakapost.gov.in ನಲ್ಲಿ ಲಭ್ಯವಿದೆ. ಪ್ರಾಜೆಕ್ಟ್‌ನ ವಿಷಯವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಈ ಮೇಲಿನ ಎರಡೂ ಹಂತಗಳಲ್ಲಿ ಉತ್ತರ ಕರ್ನಾಟಕ ವಲಯ ಮಟ್ಟದಲ್ಲಿ ಆಯ್ಕೆಯಾಗುವ 6, 7, 8 ಮತ್ತು 9ನೇ ತರಗತಿಯ ಮೊದಲ 10 ವಿದ್ಯಾರ್ಥಿಗಳ ಅಂಚೆ ಉಳಿತಾಯ ಖಾತೆಗೆ ತಲಾ ರೂ.6,000 ಜಮಾ ಮಾಡಲಾಗುವುದು.

ಅರ್ಹ ವಿದ್ಯಾರ್ಥಿಗಳು ಸೆಪ್ಟೆಂಬರ್ 10, 2026ರೊಳಗಾಗಿ ಹಿರಿಯ ಅಂಚೆ ಅಧೀಕ್ಷಕರ ಕಾರ್ಯಾಲಯ, ಧಾರವಾಡ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಸಮೀಪದ ಅಂಚೆ ಕಚೇರಿಗಳಿಗೆ ಅಥವಾ ಇಂಡಿಯಾ ಪೋಸ್ಟ್ ಕರ್ನಾಟಕ ವೆಬ್‌ಸೈಟ್ ಗೆ ಭೇಟಿ ನೀಡಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular