HomeEntertainmentನಿಮಗಿಂತ ಚಿಕ್ಕ ತಮಿಳು ನಟನಿಗೆ ಸರ್ ಅಂದ್ರಲ್ಲ ಶಿವಣ್ಣ ಎಂದಿದ್ದಕ್ಕೆ ನೀವು ನನಗಿಂತ ಚಿಕ್ಕವರು ಮೇಡಂ...

ನಿಮಗಿಂತ ಚಿಕ್ಕ ತಮಿಳು ನಟನಿಗೆ ಸರ್ ಅಂದ್ರಲ್ಲ ಶಿವಣ್ಣ ಎಂದಿದ್ದಕ್ಕೆ ನೀವು ನನಗಿಂತ ಚಿಕ್ಕವರು ಮೇಡಂ ಅಂತೀನಿ, ಹೋಗೆ, ಬಾರೆ ಅನ್ನೋಕಾಗುತ್ತಾ ಎಂದು ಕೌಂಟರ್ ಕೊಟ್ಟ ಶಿವಣ್ಣ

ಕನ್ನಡ ಮಾತ್ರವಲ್ಲದೇ ಸದ್ಯ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ಸೌತ್ ಇಂಡಿಯನ್ ಸೂಪರ್ ಸ್ಟಾರ್ ಆಗಿರುವ ಶಿವರಾಜ್‌ಕುಮಾರ್‌ಗೆ ದಕ್ಷಿಣ ಸಿನಿಮಾರಂಗದಲ್ಲಿ ಭಾರೀ ಬೇಡಿಕೆ ಇದೆ. ಜೈಲರ್ ಚಿತ್ರದಲ್ಲಿ ನಟಿಸಿದ ಬಳಿಕ ಶಿವಣ್ಣ ಧನುಷ್ ಹಾಗೂ ರಾಮ್ ಚರಣ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದು, ತಮಿಳು ಚಿತ್ರದಲ್ಲಿ ಪರಿಪೂರ್ಣ ನಾಯಕನಾಗಿಯೂ ಸಹ ನಟಿಸುತ್ತಿದ್ದಾರೆ.

ಹೀಗೆ ಕನ್ನಡದಿಂದಾಚೆಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಶಿವರಾಜ್‌ಕುಮಾರ್ ಇತ್ತೀಚೆಗಷ್ಟೆ ವಿಕಟನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಮಾತನಾಡುವಾಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವ ನಿರ್ದೇಶಕ ಹಾಗೂ ನಟ ಪ್ರದೀಪ್ ರಂಗನಾಥನ್ ಅವರನ್ನು ಉಲ್ಲೇಖಿಸಿ ಶಿವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನಗೆ ಪ್ರದೀಪ್ ಸರ್ ಎಂದರೆ ತುಂಬಾ ಇಷ್ಟ ಎಂದ ಶಿವಣ್ಣ ಧನುಷ್ ತನ್ನ ನೆಚ್ಚಿನ ನಟ, ನಿಮ್ಮನ್ನು ನೋಡಿದಾಗಲೆಲ್ಲ ಅವರನ್ನೇ ನೋಡಿದ ಹಾಗೆ ಎನಿಸುತ್ತದೆ, ನಾನು ನಿಮ್ಮ ಅಭಿಮಾನಿ ಎಂದು ತಲೆ ಬಾಗಿ ನಮಸ್ಕರಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಹಾಗೂ ಅನೇಕ ಮಂದಿ ಹೀಗೆ ನಿಮಗಿಂತ ಚಿಕ್ಕ ನಟನನ್ನು ಸರ್ ಎಂದು ಹೇಳಿ ಮರ್ಯಾದೆ ಹಾಳು ಮಾಡಿಕೊಳ್ಳುತ್ತೀರ ಎಂದು ಕಿಡಿಕಾರಿದ್ದರು ಹಾಗೂ ಹೀನಾಯವಾಗಿ ಟ್ರೋಲ್ ಮಾಡಿದ್ದರು.

ಈ ಕುರಿತು ಸದ್ಯ ನೇರವಾಗಿ ಪತ್ರಕರ್ತರು ಶಿವರಾಜ್‌ಕುಮಾರ್ ಬಳಿ ಪ್ರಶ್ನೆ ಹಾಕಿದ್ದು, ಇದಕ್ಕೆ ಉತ್ತರಿಸಿದ ಶಿವಣ್ಣ ‘ನಮಗೆ ಮರ್ಯಾದೆ ಕೊಡೋಕೆ ಚಿಕ್ಕವರು, ದೊಡ್ಡವರು ಆಗಬೇಕಂತ ಇಲ್ಲ. ನಿಮಗೂ ಕೊಡ್ತೀನಿ ಮೇಡಂ ಅಂತೀನಿ ಅಲ್ವಾ? ಏಕೆ ಅನ್ಬೇಕಮ್ಮ? ನನಗಿಂತ ಚಿಕ್ಕವರು ಮೇಡಂ ಎನ್ನಬಾರದು ಅಂತಾನಾ? ಹೆಣ್ಣುಮಕ್ಕಳನ್ನು ಮರ್ಯಾದೆ ಕೊಟ್ಟು ಮಾತನಾಡಿಸುತ್ತೇವೇ ಹೊರತು, ಬಾರೆ ಹೋಗೆ ಎಂದು ಮಾತನಾಡಿಸಿ ಅಭ್ಯಾಸನೇ ಇಲ್ಲ, ಜೀವಮಾನದಲ್ಲೇ ಇಲ್ಲ, ಅಪ್ಪಾಜಿ ಫ್ಯಾಮಿಲಿಯಲ್ಲಿ ಆ ಥರ ಇಲ್ಲವೇ ಇಲ್ಲ. ಚಿಕ್ಕವರಿಗೂ ಮರ್ಯಾದೆ ಕೊಡ್ತೀವಿ ಅಷ್ಟೇ, ಅದರಲ್ಲಿ ತಪ್ಪೇನಿಲ್ಲ. ಟೀಕೆ ಮಾಡುವವರು ಮಾಡಲಿ ಬಿಡಿ, ಟೀಕೆ ಮಾಡುವುದರಿಂದ ಅವರಿಗೆ ಸಂತೋಷ ಆಯ್ತಾ? ನನಗೂ ಸಹ ಸಂತೋಷವೇ, ಆಲ್‌ ದಿ ಬೆಸ್ಟ್’ ಎಂದು ನಯವಾಗಿ ಕೌಂಟರ್ ಕೊಟ್ಟು ಮರ್ಯಾದೆ ಕೊಡಲು ವಯಸ್ಸು ಮುಖ್ಯವಲ್ಲ ಎಂಬ ಸಂದೇಶ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular