ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮನೆ-ಮನೆ ಭೇಟಿ ಕಾರ್ಯ ಮುಕ್ತಾಯಗೊಂಡಿದೆ. ಎಸ್ಐಆರ್ ವೇಳೆ 1,08,31,945 ASDDO ಮತದಾರರು ಪತ್ತೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 1.08 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಶೇ.40-50ರಷ್ಟು ಮತದಾರರ ಹೆಸರು ಡಿಲಿಟ್ ಆಗಿದೆ ಎಂದು ತಿಳಿದುಬಂದಿದೆ.
ಜೂನ್ 30ರಿಂದ ಆರಂಭವಾಗಿದ್ದ ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು ಡೇಂಜಜರ್ ಝೋನ್ ನಲ್ಲಿದೆ. 25 ಕ್ಷೇತ್ರಗಳಲ್ಲಿ 40% ನಿಂದ 50%ನಷ್ಟು ಮತದಾರರ ಹೆಸರುಗಳು ಡಿಲೀಟ್ ಆಗಿವೆ.
ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾರರ ಹೆಸರು ಎಸ್ಐಆರ್ ಪಟ್ಟಿಯಿಂದ ಡಿಲಿಟ್ ಆಗಿದೆ ಎಂಬುದರ ಕುರುತು ಚುನಾವಣಾ ಆಯೋಗ ಅಂಕಿ-ಅಂಶ ಬಿಡಿಗಡೆ ಮಾಡಿದ್ದು, ಅವುಗಳು ಈ ಕೆಳಗಿನಂತಿವೆ.
* ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 4,71,922
ಡಿಲೀಟ್ ಲಿಸ್ಟ್ – 2,46,790
52.88% ಡಿಲೀಟ್
* ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 2,74,142
ಡಿಲೀಟ್ ಲಿಸ್ಟ್ – 1,40,801
51.36% ಡಿಲೀಟ್
* ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 4,84,973
ಡಿಲೀಟ್ ಲಿಸ್ಟ್ – 2,67_014
55.06% ಡಿಲೀಟ್
* ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 2,82,035
ಡಿಲೀಟ್ ಲಿಸ್ಟ್ – 1,46,273
51.86% ಡಿಲೀಟ್
* ವಿಜಯನಗರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 3,20,773
ಡಿಲೀಟ್ ಲಿಸ್ಟ್ – 1,65,058
51.45% ಡಿಲೀಟ್
50% ಮತಗಳು ಡಿಲಿಟ್ ಆಗ್ತಿರುವ ಶಾಸಕರ ಕ್ಷೇತ್ರಗಳು
1. ರಾಮಲಿಂಗರೆಡ್ಡಿ ಕ್ಷೇತ್ರ
2. ಸತೀಶ್ ರೆಡ್ಡಿ ಕ್ಷೇತ್ರ
3. ಮುನಿರಾಜು ಕ್ಷೇತ್ರ
4. ಕೃಷ್ಣಪ್ಪ ಕ್ಷೇತ್ರ
5. ಎಸ್ ರಘು
20 ವಿಧಾನಸಭಾ ಕ್ಷೇತ್ರಗಳಲ್ಲಿ 40 ರಿದ 49% ಮತಗಳು ಡಿಲೀಟ್ ಆಗಿವೆ.
ಅಪಾಯದಲ್ಲಿ 20 ವಿಧಾನಸಭಾ ಕ್ಷೇತ್ರಗಳ ಲಿಸ್ಟ್
* ಗೋವಿಂದರಾಜ ನಗರ
ಒಟ್ಟು ಮತದಾರರು – 3,06,486
ಡಿಲೀಟ್ ಲಿಸ್ಟ್ – 1,49,707
48.85% ಡಿಲೀಟ್
* ಬಸವನಗುಡಿ ಕ್ಷೇತ್ರ
ಒಟ್ಟು ಮತದಾರರು – 2,37,161
ಡಿಲೀಟ್ ಲಿಸ್ಟ್ – 1,14,013
48.07% ಡಿಲೀಟ್
ಆರ್ ಅಶೋಕ್ ಕ್ಷೇತ್ರದಲ್ಲಿ 43% ಮತದಾರರು ಹೆಸರು ಡಿಲೀಟ್.
ಪದ್ಮನಾಭನಗರ
ಒಟ್ಟು ಮತದಾರರು -2.93,149
ಡಿಲೀಟ್ ಲಿಸ್ಟ್ – 1,27,647
43,54% ಡಿಲೀಟ್ ಆಗಿವೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ 1.08 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಕೈಬಿಡುವ ಸಾಧ್ಯತೆ:
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಒಟ್ಟು 5,54,32,314 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈ ಪೈಕಿ 4,46,00,369 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. SIR ಪ್ರಕ್ರಿಯೆಯಲ್ಲಿ ಒಟ್ಟು 1,08,31,945 ASDDO ಮತದಾರರು ಪತ್ತೆಯಾಗಿದ್ದಾರೆ. ಇವರ ಪೈಕಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಬೇಕಾದ ಸಾಧ್ಯತೆ ಇದೆ ಎನ್ನಲಾಗಿದೆ.
ASDDO ಎಂದರೆ Absent, Shifted, Dead, Duplicate and Others ಎಂಬ ವರ್ಗಗಳನ್ನು ಒಳಗೊಂಡಿದೆ. ಅಂದರೆ ಗೈರುಹಾಜರಾಗಿರುವವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಡುಪ್ಲಿಕೇಟ್ ಹೆಸರುಗಳು ಹಾಗೂ ಇತರೆ ಕಾರಣಗಳಿಂದ ಪರಿಶೀಲನೆ ಅಗತ್ಯವಿರುವ ಮತದಾರರು ಈ ವರ್ಗಕ್ಕೆ ಸೇರುತ್ತಾರೆ.
ಎಸ್ ಐಆರ್ ವೇಳೆ ಲಭ್ಯವಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 15,28,985 ಮತದಾರರು ನಾಪತ್ತೆಯಾಗಿದ್ದಾರೆ. 65,61,607 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ. ಇದೇ ವೇಳೆ 16,38,839 ಮತದಾರರು ಮೃತಪಟ್ಟಿರುವುದು, 7,07,792 ನಕಲಿ ಮತದಾರರು ಹಾಗೂ 3,94,722 ಇತರೆ ವರ್ಗದ ಮತದಾರರು ಪತ್ತೆಯಾಗಿದ್ದಾರೆ.
ಈ ಅಂಕಿ-ಅಂಶಗಳ ಆಧಾರದಲ್ಲಿ ಸುಮಾರು 1.08 ಕೋಟಿ ಮತದಾರರ ಹೆಸರುಗಳು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಅಂತಿಮವಾಗಿ ಯಾರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಲಿದೆ ಅಥವಾ ಕೈಬಿಡಲಾಗುತ್ತದೆ ಎಂಬುದು ಮುಂದಿನ ಪರಿಶೀಲನೆ ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಬಳಿಕ ಸ್ಪಷ್ಟವಾಗಲಿದೆ.
ಆಗಸ್ಟ್ 24ಕ್ಕೆ ಮೊದಲ ಕರಡು ಪಟ್ಟಿ
SIR ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಅಥವಾ ಯಾವುದೇ ವಿವರಗಳಲ್ಲಿ ತಪ್ಪು ಕಂಡುಬಂದರೆ, ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗೆ ಅವಕಾಶ
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಇರಲಿದೆ. ಈ ಅವಧಿಯಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಅಕ್ಟೋಬರ್ 27ರಂದು ಅಂತಿಮ ಪಟ್ಟಿ
ಪರಿಶೀಲನೆ, ಆಕ್ಷೇಪಣೆ ಮತ್ತು ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಒಂದುವೇಳೆ ಮೊದಲ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದ ಮತದಾರರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ಅವಧಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶವಿದೆ.

