ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಅನೈತಿಕ ಸಂಬಂಧಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತಹುದೇ ಮತ್ತೊಂದು ವಿಡಿಯೋ ಈಗ ಮುನ್ನೆಲೆಗೆ ಬಂದಿದ್ದು, ಇಂಟರ್ನೆಟ್ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಚೀನಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪತಿಯ ಅನುಪಸ್ಥಿತಿಯಲ್ಲಿ ಮನೆಯಲ್ಲಿ ಪ್ರಿಯಕರನೊಂದಿಗೆ ಕಾಲಳೆಯುತ್ತಿದ್ದ ಪತ್ನಿ ಸಿಕ್ಕಿಬಿದ್ದಿರುವ ದೃಶ್ಯಗಳು ವೈರಲ್ ಆಗಿವೆ.
ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಯುವತಿಯೊಬ್ಬರು ತನ್ನ ಪತಿಯ ಅನುಪಸ್ಥಿತಿಯಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದರು. ಪತಿ ಕೆಲಸಕ್ಕೆ ಹೋಗಿದ್ದಾನೆ ಎಂದು ನಂಬಿ ಅವರು ಈ ಕೃತ್ಯದಲ್ಲಿ ತೊಡಗಿದ್ದರು. ಆದರೆ ಪತಿಗೆ ತನ್ನ ಹೆಂಡತಿಯ ನಡವಳಿಕೆಯ ಮೇಲೆ ಮೊದಲೇ ಅನುಮಾನವಿತ್ತು. ಎಂದಿನಂತೆ ಪತಿ ಕೆಲಸಕ್ಕೆ ಹೋಗುವವರಂತೆ ನಾಟಕವಾಡಿ ಮನೆಯಿಂದ ಹೊರಟಿದ್ದಾನೆ. ಬಳಿಕ ಆಕೆಯ ಪ್ರಿಯಕರ ಮನೆಗೆ ಬಂದ ತಕ್ಷಣ ಇಬ್ಬರೂ ಬೆಡ್ರೂಮ್ಗೆ ತೆರಳಿದ್ದಾರೆ. ಅದೇ ಸಂದರ್ಭದಲ್ಲಿ ಯುವಕ ರಹಸ್ಯವಾಗಿ ಮನೆಗೆ ವಾಪಸ್ ಬಂದು ನೇರವಾಗಿ ಬೆಡ್ರೂಮ್ ಬಾಗಿಲು ತೆರೆದಿದ್ದಾನೆ.
ಕೋಪದಿಂದ ಹಲ್ಲೆ ನಡೆಸಿದ ಪತಿ
ಇಬ್ಬರನ್ನೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ ಆಕ್ರೋಶಗೊಂಡ ಪತಿ, ಯಾವುದೇ ಮಾತುಕತೆಗೆ ಅವಕಾಶ ನೀಡದೆ ಇಬ್ಬರ ಮೇಲೆ ಮುಗಿಬಿದ್ದಿದ್ದಾನೆ. ಹೆಂಡತಿ ಹಾಗೂ ಆಕೆಯ ಪ್ರಿಯಕರ ಇಬ್ಬರಿಗೂ ಮನಬಂದಂತೆ ಹೊಡೆದಿದ್ದಾನೆ. ಪತಿಯ ಆಕ್ರೋಶಕ್ಕೆ ತತ್ತರಿಸಿದ ಪ್ರೇಮಿ, ಆತನ ಕಾಲಿಗೂ ಬಿದ್ದು ಪ್ರಾಣ ಭಿಕ್ಷೆ ಬೇಡಿದ್ದಾನೆ. ಇನ್ನು ಪತ್ನಿಯೂ ಕೂಡ ಪತಿಯ ಕೋಪದ ಮುಂದೆ ಅಸಹಾಯಕರಾಗಿ ನಿಂತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
‘ಘರ್ ಕಾ ಕಾಲೆಶ್’ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಮಹಾಪೂರವೇ ಹರಿದುಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಮೋಸ ಮಾಡಿದವರಿಗೆ ಇಂತಹ ಶಿಕ್ಷೆಯೇ ಸರಿಯಾದದ್ದು ಎಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ಗಂಡನ ಆಕ್ರೋಶ ಸಹಜವೇ ಆದರೂ ಕೈ ಮಾಡುವುದು ಸರಿಯಲ್ಲ ಎಂದು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

