ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಮುಖಿಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಬ್ಬಗಳ ಋತು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತ ಕಂಡಿರುವುದರಿಂದ ಚಿನ್ನದ ದರ ನಿರಂತರ ಏರಿಕೆ ಹಾದಿಯಲ್ಲಿದೆ.
ಆಗಸ್ಟ್ 18ರ ಮಂಗಳವಾರದಂದು ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆಯಾಗಿದೆ. ಕಳೆದ 8 ದಿನಗಳಲ್ಲಿಯೇ 10 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರಿ ₹5,180 ಹೆಚ್ಚಳವಾಗಿದ್ದರೆ, ಆಗಸ್ಟ್ 1 ರಿಂದ 18 ದಿನಗಳ ಅವಧಿಯಲ್ಲಿ ಒಟ್ಟಾರೆಯಾಗಿ ಬರೋಬ್ಬರಿ ₹11,670 ಏರಿಕೆಯಾಗಿದೆ
ಇಂದಿನ ಚಿನ್ನದ ದರ ವಿವರ (ಆಗಸ್ಟ್ 18, 2026)
24 ಕ್ಯಾರೆಟ್ (ಅಪರಂಜಿ ಚಿನ್ನ):
1 ಗ್ರಾಂ ಬೆಲೆ: ₹15,589 (ಇಂದಿನ ಏರಿಕೆ: ₹23)
10 ಗ್ರಾಂ ಬೆಲೆ: ₹1,55,890
22 ಕ್ಯಾರೆಟ್ (ಆಭರಣ ಚಿನ್ನ):
1 ಗ್ರಾಂ ಬೆಲೆ: ₹14,290 (ಇಂದಿನ ಏರಿಕೆ: ₹20)
10 ಗ್ರಾಂ ಬೆಲೆ: ₹1,42,900
18 ಕ್ಯಾರೆಟ್ ಚಿನ್ನ:
1 ಗ್ರಾಂ ಬೆಲೆ: ₹11,692 (ಇಂದಿನ ಏರಿಕೆ: ₹16)
10 ಗ್ರಾಂ ಬೆಲೆ: ₹1,16,920
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರ
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೂ, ಬೆಳ್ಳಿಯ ದರ ಇಂದು ಸ್ಥಿರತೆ ಕಾಯ್ದುಕೊಂಡಿದೆ:
1 ಗ್ರಾಂ ಬೆಳ್ಳಿ: ₹250
100 ಗ್ರಾಂ ಬೆಳ್ಳಿ: ₹25,000
1 ಕೆಜಿ ಬೆಳ್ಳಿ: ₹2,50,000
ಅಂತರರಾಷ್ಟ್ರೀಯ ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳಲ್ಲಿ ಇಳಿಕೆಯ ವಾತಾವರಣ ಕಂಡುಬಂದರೂ, ಭಾರತೀಯ ಹಾಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಬೆಲೆಯಲ್ಲಿ ಅಲ್ಪ ಏರಿಕೆ ದಾಖಲಾಗಿದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲೂ 100 ಗ್ರಾಂ ಬೆಳ್ಳಿ ಬೆಲೆ ಸುಮಾರು ₹25,500 ರಷ್ಟಿದೆ.

