ತುಮಕೂರು: ಸಿದ್ದರಾಮಯ್ಯ ಸ್ಟ್ರಾಂಗ್ ಇದ್ದರೆ ಕಾಂಗ್ರೆಸ್ ಪಕ್ಷವೂ ಸ್ಟ್ರಾಂಗ್ ಇರುತ್ತದೆ; ಸಿದ್ದರಾಮಯ್ಯ ವೀಕ್ ಆದರೆ ಕಾಂಗ್ರೆಸ್ ಪಕ್ಷವೂ ವೀಕ್ ಆಗುತ್ತದೆ. ಪಕ್ಷವೂ ದುರ್ಬಲಗೊಳ್ಳುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ರಾಜಣ್ಣ, ಸಿದ್ದರಾಮಯ್ಯನವರು ಅಹಿಂದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ತಂದುಕೊಡುತ್ತಾರೆ. ಇದೇ ರೀತಿ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಜಾತಿ ಆಧಾರದ ಮೇಲೆ ಬಿಜೆಪಿಗೆ ವೋಟ್ ಯ್ತಂದುಕೊದುತ್ತಾರೆ. ಹಾಗೇ ಹೆಚ್.ಡಿ.ದೇವೇಗೌಡರು ಜೆಡಿಎಸ್ ಪಕ್ಷಕ್ಕೆ ತಮ್ಮ ಜಾತಿಯ ಮತಗಳನ್ನು ತರುತ್ತಾರೆ. ರಾಜ್ಯದಲ್ಲಿ ಈ ಮೂವರು ನಾಯಕರೇ ಜಾತಿ ಆಧಾರದ ಮೇಲೆ ಮತಗಳನ್ನು ಸೆಳೆಯುವವರು ಎಂದು ಹೇಳಿದರು.
ಸಿದ್ದರಾಮಯ್ಯ ವೀಕ್ ಆಗುತ್ತಿದ್ದಾರೆ ಎಂಬುದು ನಿಜವಲ್ಲ. ಸಿದ್ದರಾಮಯ್ಯ ವೀಕ್ ಆದರೆ ಕಾಂಗ್ರೆಸ್ ಪಕ್ಷವೇ ವೀಕ್ ಆದಂತೆ. ಅಹಿಂದ ಮತಗಳನ್ನ ಸೆಳೆಯವ ಶಕ್ತಿ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ ಸಾಧ್ಯ ಎಂದರು.
ಇದೇ ವೇಳೆ, ಸಿಎಂ ಡಿಕೆ ಶಿವಕುಮಾರ್ ಅವರನ್ನು ನೋಡಿ ಒಕ್ಕಲಿಗ ಸಮುದಾಯದವರು ಮತ ಹಾಕುತ್ತಾರೆಯೇ ಎಂಬ ಪ್ರಶ್ನೆಯನ್ನೂ ರಾಜಣ್ಣ ಮುಂದಿಟ್ಟಿದ್ದಾರೆ. ದೇವೇಗೌಡರನ್ನೇ ನೋಡಿ ಒಕ್ಕಲಿಗರು ಮತ ಹಾಕುತ್ತಾರೆ. ಈಗೇನೋ ಮುಖ್ಯಮಂತ್ರಿಯಾಗುವವರು ನಮ್ಮವರು ಎಂಬ ಭಾವನೆಯಿಂದ ಒಕ್ಕಲಿಗರ ಶೇ 5 ಹೆಚ್ಚುವರಿ ಮತ ತರಬಹುದು. ಆದರೆ ಗೆಲ್ಲುವಷ್ಟು ಮತ ಸಿಗುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವುದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್ನಲ್ಲೇ ಇರಬೇಕು ಎಂಬ ಮನಸ್ಥಿತಿಯಲ್ಲಿ ಇದ್ದೇನೆ. ಗ್ರೆಸ್ ತೊರೆಯಲ್ಲ, ಯಾವ ಪಕ್ಷಕ್ಕೂ ಹೋಗಲ್ಲ. ಕ್ಷೇತ್ರ ಪುನರ್ವಿಂಗಡಣೆ ಆದಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಮುಂದೆ 10 ಲಕ್ಷ ಜನ ಸಂಖ್ಯೆಗೆ ಒಂದು ಲೋಕಸಭೆ ಮಾಡುವ ಉದ್ದೇಶವಿದ್ದು, ಡಿ-ಲಿಮಿಟೇಶನ್ ಆದ್ರೆ ಮಧುಗಿರಿ ಉಪವಿಭಾಗದ ತಾಲೂಕುಗಳು ಲೋಕಸಭಾ ವ್ಯಾಪ್ತಿಗೆ ಸೇರಲಿದೆ. ಇದು ಸಾಧ್ಯವಾದರೆ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ರಾಜಕೀಯದಲ್ಲಿ ವ್ಯತ್ಯಾಸಗಳು ಸಾಮಾನ್ಯ, ಆದ್ರೆ ನನಗೆ ಕಾಂಗ್ರೆಸ್ ಎಲ್ಲವನ್ನೂ ನೀಡಿದೆ. ಸಾಮಾನ್ಯ ಕ್ಷೇತ್ರದಲ್ಲಿ ಎಸ್.ಟಿ ಸಮುದಾಯಕ್ಕೆ ಸೇರಿದ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿದೆ. ತಳ ಸಮುದಾಯಗಳಿಗೆ, ಅಸಹಾಯಕ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಬಂಗಾರಪ್ಪ, ವೀರಪ್ಪಮೊಯ್ಲಿ, ಧರ್ಮಸಿಂಗ್ ಅಂಥವರು ಕಾಂಗ್ರೆಸ್ನಲ್ಲಿ ಮಾತ್ರ ಸಿಎಂ ಆಗಲು ಸಾಧ್ಯ ಎಂದು ಹೇಳಿದರು.

