
ಹಠ ಹಿಡಿಯುವಾಗ ಕೈ ಕಾಲು ಕಟ್ಟಿ ಮದ್ದು ಕುಡಿಸಿದರೆ ಅದು ಬಾಯಿಯಿಂದ ಹೊರಹಾಕುವ ಸಾಧ್ಯತೆಯೇ ಹೆಚ್ಚು. ಇಲ್ಲವೇ ಮೂಗಿಗೆ ಹೋಗಿ ಮತ್ತಷ್ಟು ಕೆಮ್ಮು ಬರಬಹುದು. ಇದನ್ನು ತಪ್ಪಿಸಲು ಸಮಾಧಾನದಿಂದ ಮಕ್ಕಳಿಗೆ ಔಷಧ ನೀಡಿ. ಅವರಿಗಿಷ್ಟವಾದ ಟಾಯ್ ಕೈಗೆ ಕೊಡಿ. ಇಲ್ಲವೇ ರೈಮ್ಸ್ ಹಾಕಿಸಿಟ್ಟು ಮದ್ದು ಬಾಯಿಗೆ ಹಾಕಿ ಬಿಡಿ.
ಮಕ್ಕಳು ಕಣ್ಣು ಮುಚ್ಚಿ ತೆರೆಯುವುದರೊಳಗೆ ಔಷಧ ಬಾಯೊಳಗೆ ಹೋಗಿರಬೇಕು. ತುಸು ದೊಡ್ಡವರಾದ ಮೇಲೆ ಅವರಿಗಿಷ್ಟದ ಉಡುಗೊರೆ ನೀಡುವ ಆಮಿಷವೊಡ್ಡಿ. ಇದನ್ನು ಕುಡಿದರೆ ಪಾರ್ಕ್ ಗೆ ಕರೆದೊಯ್ಯುವುದಾಗಿ ಹೇಳಿ.

