HomeKarnatakaಬರಪರಿಹಾರ ತಲುಪಲಿದೆ: ಸಿಎಂ‌ ಡಿ ಕೆ‌ ಶಿವಕುಮಾರ್

ಬರಪರಿಹಾರ ತಲುಪಲಿದೆ: ಸಿಎಂ‌ ಡಿ ಕೆ‌ ಶಿವಕುಮಾರ್

ಬೆಂಗಳೂರು-‘ರಾಜ್ಯದ ರೈತ ಬಾಂಧವರಿಗೆ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು‌ ಕಂತಿನಲ್ಲಿ 5,000 ರೂ. ಬಿಡುಗಡೆ ಮಾಡುತ್ತದೆ. ಮೊದಲನೆ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ.‌ ಪ್ರತಿ ರೈತರಿಗೆ ಹಣ ತಲುಪಿಸಲು ಸೂತ್ರ ರಚಿಸಿದೆ‌’ ಎಂದು ಸಿಎಂ‌ ಡಿ ಕೆ‌ ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಪ್ರತಿ ರೈತರಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ​ಸರಿಯಾದ ಖಾತೆಗಳಿಗೆ ಹಣ ತಲುಪಿದೆ. ಆದರೆ ಹಣ ತಲುಪದ ರೈತರ ಖಾತೆಯಲ್ಲಿ ಇರುವ ಅಡತಡೆ ನಿವಾರಿಸಿ ಪಾವತಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ‌’ ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಸರ್ಕಾರ ಕೊಡದೆ ಇದ್ದರೂ ನುಡಿದಂತೆ ನಾವು ಕೊಡುತ್ತೇವೆ.’​ಒಂದು ಪಕ್ಷ ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಮ್ಮಿಯಾಗಿದ್ದರೆ ಅದನ್ನು ಸರಿಪಡಿಸಲಾಗುವುದು. ​ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ರೈತರಿಗೆ ನುಡಿದಂತೆ ಎರಡು ಕಂತುಗಳಲ್ಲಿ 5 ಸಾವಿರ ರೂ. ಪರಿಹಾರ ಪಾವತಿ ಮಾಡುತ್ತದೆ’ ಎಂದು ಭರವಸೆ ನೀಡಿದರು.

ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ

‘​ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು’ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular