ಚಾಮರಾಜನಗರ: ರಾಗಿ ಕೊಯ್ಯುವಾಗ ಹಾವು ಕಡಿದು ರೈತ ಸಾವನ್ನಪ್ಪಿದ ಘಟನೆ ಯಳಂದೂರು ತಾಲೂಕಿನ ಯರಿಯೂರಿನಲ್ಲಿ ಶನಿವಾರ ನಡೆದಿದೆ.
ನಾಗರಹಾವು ಕಡಿತಕ್ಕೊಳಗಾದ ಯರಿಯೂರಿನ ಉಪ್ಪಾರ ಬಡಾವಣೆಯ ರೈತ ಚಿಕ್ಕಮಹದೇವಸ್ವಾಮಿ(46) ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕಟಾವಿಗೆ ಬಂದಿದ್ದ ರಾಗಿ ತೆನೆ ಕೊಯ್ಯುತ್ತಿದ್ದ ವೇಳೆ ಚಿಕ್ಕಮಹದೇವಸ್ವಾಮಿಯವರಿಗೆ ಹಾವು ಕಚ್ಚಿದೆ. ಇದರಿಂದ ಭಯಗೊಂಡು ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಗೆ ತೆರಳುವ ಮೊದಲೇ ಮಾರ್ಗ ಮಧ್ಯದಲ್ಲಿ ಚಿಕ್ಕಮಹದೇವಸ್ವಾಮಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

