HomeInternationalVietnam ಸ್ಪೀಡ್ ಬೋಟ್ ದುರಂತ: ಮೊಮ್ಮಗಳ ಮುಖ ನೋಡಿದ್ದೇ ಕೊನೆ, 15 ತಮಿಳು ಉದ್ಯಮಿಗಳ ಸಾವು

Vietnam ಸ್ಪೀಡ್ ಬೋಟ್ ದುರಂತ: ಮೊಮ್ಮಗಳ ಮುಖ ನೋಡಿದ್ದೇ ಕೊನೆ, 15 ತಮಿಳು ಉದ್ಯಮಿಗಳ ಸಾವು

ವಿದೇಶಿ ಪ್ರವಾಸದ ಸಂಭ್ರಮದಲ್ಲಿದ್ದ ಭಾರತೀಯ ಮೂಲದ ಉದ್ಯಮಿಗಳ ತಂಡವೊಂದಕ್ಕೆ ವಿಯೆಟ್ನಾಂನ ಕಡಲು ಮೃತ್ಯುಕೂಪವಾಗಿ ಪರಿಣಮಿಸಿದೆ. ಅಲ್ಲಿನ ಪ್ರಸಿದ್ಧ ಪ್ರವಾಸಿ ದ್ವೀಪ ‘ಫೂ ಕ್ವೋಕ್’ ಬಳಿ ಪ್ರವಾಸಿಗರಿದ್ದ ಸ್ಪೀಡ್ ಬೋಟ್ ಸಮುದ್ರದ ರಕ್ಕಸ ಅಲೆಗಳಿಗೆ ಸಿಲುಕಿ ಮಗುಚಿ ಬಿದ್ದಿದ್ದು, ತಮಿಳುನಾಡು ಮೂಲದ 15 ಪ್ರವಾಸಿಗರು ದುರಂತ ಅಂತ್ಯ ಕಂಡಿದ್ದಾರೆ.

ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ‘ಲಾವಾ ಮೊಬೈಲ್ಸ್’ ತನ್ನ ಉದ್ಯಮ ಪಾಲುದಾರರಿಗಾಗಿ (ಚಾನೆಲ್ ಪಾರ್ಟ್ನರ್ಸ್) ಆಯೋಜಿಸಿದ್ದ ಈ ವಿಶೇಷ ಪ್ರವಾಸವು ಕೊನೆಗೆ ತೀವ್ರ ಶೋಕದಲ್ಲಿ ಅಂತ್ಯಗೊಂಡಿದೆ.

ಮೊಮ್ಮಗಳ ಮುಖ ನೋಡಿದ್ದೇ ಕೊನೆ…!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರ ಪೈಕಿ ತಿರುಚಿರಾಪಳ್ಳಿಯ 54 ವರ್ಷದ ಉದ್ಯಮಿ ಶೇಕ್ ಅಬ್ದುಲ್ಲಾ ಅಬ್ದುಲ್ ಮಜೀದ್ ಅವರ ಸಾವು ಇಡೀ ಕುಟುಂಬವನ್ನು ಜರ್ಜರಿತಗೊಳಿಸಿದೆ. ಶನಿವಾರ ಬೆಳಿಗ್ಗೆಯಷ್ಟೇ ಭಾರತದಲ್ಲಿದ್ದ ಮಗನೊಂದಿಗೆ ವ್ಯಾಪಾರದ ವಿಷಯಗಳನ್ನು ಮಾತನಾಡಿದ್ದ ಅಬ್ದುಲ್ಲಾ, ತದನಂತರ ಪತ್ನಿಗೆ ಕರೆ ಮಾಡಿ, “ನಾನು ನೆಟ್‌ವರ್ಕ್ ಇಲ್ಲದ ದ್ವೀಪಕ್ಕೆ ಹೋಗುತ್ತಿದ್ದೇನೆ, ಮರಳಿ ಬರುವವರೆಗೂ ಫೋನ್ ಮಾಡಬೇಡ” ಎಂದಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ತಮಗೆ ಜನಿಸಿದ್ದ ಪುಟಾಣಿ ಮೊಮ್ಮಗಳನ್ನು ವಿಡಿಯೋ ಕಾಲ್ ಮೂಲಕ ಅತ್ಯಂತ ಪ್ರೀತಿಯಿಂದ ನೋಡಿ ಮುದ್ದಾಡಿದ್ದರು. ಆದರೆ ಅದೇ ತಮ್ಮ ಕೊನೆಯ ಕರೆಯಾಗಲಿದೆ ಎಂದು ಅವರು ಊಹಿಸಿರಲಿಲ್ಲ.

“ಅವರಿಗೆ ಇಂತಹ ಪ್ರವಾಸಗಳಿಗೆ ಹೋಗುವ ಅಭ್ಯಾಸವಿರಲಿಲ್ಲ. ಮೊದಲಿಗೆ ಮಗನನ್ನೇ ಕಳುಹಿಸಲು ನಿರ್ಧರಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ತಾವೇ ಹೋದರು. ವಿಧಿಯ ಆಟದ ಮುಂದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಮೃತರ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ.

ಕ್ಷಣಾರ್ಧದಲ್ಲಿ ಮುಳುಗಿದ ಬೋಟ್: ಬದುಕುಳಿದವರ ಸಾಕ್ಷ್ಯ

ಅನ್ ಥೋಯ್ ಬಂದರಿನತ್ತ ಮರಳುತ್ತಿದ್ದ ಬೋಟ್‌ನಲ್ಲಿ ಒಟ್ಟು 32 ಭಾರತೀಯರು ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ದೋಣಿ ಮುಳುಗುತ್ತಿದ್ದಂತೆ ಸ್ಥಳೀಯ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ 21 ಜನರನ್ನು ಪ್ರಾಣಾಪಾಯದಿಂದ ಪಾರುಮಾಡಿವೆ.

ಅವಘಡದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಪಳನಿ ಮೂಲದ ನಿರ್ಮಲ್ ಕುಮಾರ್ ಎಂಬುವರು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. “ಕಣ್ಣು ಮುಚ್ಚಿ ಬಿಡುವುದರೊಳಗೆ ಇಡೀ ಬೋಟ್ ಉಲ್ಟಾ ಆಯಿತು. ಸಮುದ್ರದಲ್ಲಿ ಎದ್ದ ದೈತ್ಯ ಅಲೆಗಳು ಹಾಗೂ ದೋಣಿಯಲ್ಲಿದ್ದ ಮಿತಿ ಮೀರಿದ ಜನದಟ್ಟಣೆಯೇ ಈ ದುರಂತಕ್ಕೆ ಕಾರಣ” ಎಂದು ಅವರು ತಿಳಿಸಿದ್ದಾರೆ.

https://publish.x.com/?query=https%3A%2F%2Ftwitter.com%2FPTI_News%2Fstatus%2F2075937922025717937&widget=Video

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular