ಬೆಂಗಳೂರು: 2028ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ನಾಯಕರು, ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ವಿರೊಧಿಗಳ ವಿರುದ್ಧ ರಾಜಕೀಯ ನಾಯಕರು ಈಗಿನಿಂದಲೇ ವಾಗ್ದಾಳಿ ನಡೆಸಲಾರಂಭಿಸಿದ್ದಾರೆ. ಅದೇ ರೀತಿ ಮಾಜಿ ಶಾಸಕ, ಬಿಜೆಪಿ ನಾಯಕ ಬಸವರಾಜ್ ದಡೇಸೂಗೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ್ ದಡೇಸೂಗೂರು , ಮುಂಬರುವ ಚುನಾವಣೆಯಲ್ಲಿ ಶಿವರಾಜ್ ತಂಗಡಿಗಿ ಸೋಲು ಖಚಿತ. ನಾನು ರಕ್ತದಲ್ಲಿ ಬರೆದುಕೊಂಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಶಿವರಾಜ್ ತಂಗಡಗಿ ಸೋಲುತ್ತಾರೆ ಎಂದು ತಿಳಿಸಿದ್ದಾರೆ.
ಶಿವರಾಜ್ ತಂಗಡಿಗೆ ಗೆಲ್ಲಲು ಸಾದ್ಯವೇ ಇಲ್ಲ. ಇದನ್ನು ಬರೆದಿಟ್ಟುಕೊಳ್ಳಿ. ತಂಗಡಗಿ 50,000 ಮತಗಳ ಅಂತರದಿಂದ ಸೋಲನುಭವಿಸಲಿದ್ದಾರೆ. ಇದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.
ತಂಗಡಗಿ ವಿರುದ್ಧ ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಹಾಗೊಂದುವೇಳೆ ಶಿವರಾಜ್ ತಂಗಡಗಿ ಗೆದ್ದರೆ ನನ್ನ 50 ಎಕರೆ ಜಮೀನು ಅವರಿಗೆ ಕೊಡುತ್ತೇನೆ. ಒಂದು ವೇಳೆ ನಾನು ಗೆದ್ದರೆ ತಂಗಡಗಿ 50 ಎಕರೆ ಜಮೀನು ನನಗೆ ಗೊಡಬೇಕು ಎಂದು ಸವಾಲು ಹಾಕಿದರು.
ಈ ಮೂಲಕ ಮಾಜಿ ಶಾಸಕ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಬಸವರಾಜ್ ದಡೇಸೂಗೂರು, ಮುಂಬರುವ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದಿಂದ ತಮ್ಮ ಸ್ಪರ್ಧೆಯನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.

