HomeLatest NewsALERT : 'ಆನ್ ಲೈನ್' ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ : ಮಿಸ್...

ALERT : ‘ಆನ್ ಲೈನ್’ ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ : ಮಿಸ್ ಮಾಡದೇ ಈ ಸುದ್ದಿ ಓದಿ.!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಕಷ್ಟ. ಬೆಂಗಳೂರಿನಲ್ಲಿ ಮನೆ ಹುಡುಕುವ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಈಗ ಹೊಸ ಜಾಲವನ್ನೇ ಸೃಷ್ಟಿಸಿದ್ದಾರೆ.

ಬಾಡಿಗೆ ಮನೆಗಳ ಕೊರತೆಯನ್ನು ಬಳಸಿಕೊಂಡು ಆನ್ಲೈನ್ನಲ್ಲಿ ನಕಲಿ ಜಾಹೀರಾತುಗಳನ್ನು ನೀಡಿ ಅಡ್ವಾನ್ಸ್ ಹಣ ದೋಚುವ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿವೆ. ‘ಮನೆ ನೋಡಲು ಬರುವ ಮುನ್ನ ವಿಜಿಟರ್ ಪಾಸ್ ಪಡೆಯಿರಿ’ ಎಂಬ ವಂಚಕರ ಹೊಸ ತಂತ್ರಕ್ಕೆ ಈಗಾಗಲೇ ಹಲವು ವಿದ್ಯಾವಂತರು ಬಲಿಯಾಗುತ್ತಿದ್ದು, ಮನೆ ಹುಡುಕುವವರು ಈಗ ಡಬಲ್ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.”ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ಐಷಾರಾಮಿ ಫ್ಲಾಟ್ಗಳ ಆಕರ್ಷಕ ಫೋಟೋಗಳನ್ನು ಜಾಹೀರಾತುಗಳಲ್ಲಿ ಬಳಸಿ, ಅಡ್ವಾನ್ಸ್ ಹೆಸರಿನಲ್ಲಿ ಹಣ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಇತ್ತೀಚೆಗೆ ಬೆಂಗಳೂರಿನ ಸೌಮ್ಯ ಎಂಬ ವೈದ್ಯೆಯೊಬ್ಬರು ಇದೇ ರೀತಿ ವಂಚನೆಗೊಳಗಾಗಿದ್ದಾರೆ. ಮನೆ ನೋಡಲು ₹2,000 ಹಾಗೂ ಅಡ್ವಾನ್ಸ್ ಹೆಸರಿನಲ್ಲಿ ಹಂತ ಹಂತವಾಗಿ ₹10,000ಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಅವರು ನೀಡಿದ ವಿಳಾಸಕ್ಕೆ ಹೋದಾಗ ಅಲ್ಲಿ ಅಂತಹ ಯಾವುದೇ ಫ್ಲಾಟ್ ಇರಲಿಲ್ಲ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಂಚನೆ ಹೇಗೆ ನಡೆಯುತ್ತೆ..?
ಹೌಸಿಂಗ್ ಡಾಟ್ ಕಾಮ್ (Housing.com) ಸೇರಿದಂತೆ ವಿವಿಧ ವೆಬ್ಸೈಟ್ಗಳಲ್ಲಿ ವಂಚಕರು ಅತ್ಯಂತ ಕಡಿಮೆ ಬೆಲೆಗೆ ಐಷಾರಾಮಿ ಫ್ಲಾಟ್ಗಳು ಬಾಡಿಗೆಗೆ ಲಭ್ಯವಿದೆ ಎಂದು ಪೋಸ್ಟ್ ಮಾಡುತ್ತಾರೆ. ಇದಕ್ಕೆ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಸುಂದರವಾದ ಮನೆಯ ಫೋಟೋಗಳನ್ನು ಲಗತ್ತಿಸುತ್ತಾರೆ.

ವಿಜಿಟರ್ ಪಾಸ್ ನೆಪ: ಗ್ರಾಹಕರು ಫೋನ್ ಮಾಡಿದಾಗ, “ಮನೆ ನೋಡಲು ಬರಬೇಕಾದರೆ ಮೊದಲು ಸೆಕ್ಯೂರಿಟಿ ಕಾರಣಕ್ಕಾಗಿ ವಿಜಿಟರ್ ಪಾಸ್ ಪಡೆಯಬೇಕು” ಎಂದು ಹೇಳಿ ₹2,000 ರಿಂದ ₹5,000 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಲು ಕೇಳುತ್ತಾರೆ.ನಕಲಿ ವಿಳಾಸ: ಹಣ ಪಡೆದ ನಂತರ ವಂಚಕರು ಯಾವುದೋ ಒಂದು ಅಪಾರ್ಟ್ಮೆಂಟ್ನ ನಕಲಿ ವಿಳಾಸ ನೀಡುತ್ತಾರೆ. ಗ್ರಾಹಕರು ಅಲ್ಲಿಗೆ ಹೋದಾಗ ಅಂತಹ ಫ್ಲಾಟ್ ಅಥವಾ ಆ ಹೆಸರಿನ ವ್ಯಕ್ತಿ ಅಲ್ಲಿ ಇಲ್ಲದಿರುವುದು ತಿಳಿದುಬರುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular