HomeEntertainmentಶತ್ರುಘ್ನ ಸಿನ್ಹಾ ಸಂಸಾರದಲ್ಲಿ ಅಣ್ಣನೇ ವಿಲನ್: ಎರಡನೇ ಮದುವೆ ಆಗದಿದ್ದರೆ ಗುಟ್ಟು ರಟ್ಟು ಮಾಡುವುದಾಗಿ ಧಮ್ಕಿ...

ಶತ್ರುಘ್ನ ಸಿನ್ಹಾ ಸಂಸಾರದಲ್ಲಿ ಅಣ್ಣನೇ ವಿಲನ್: ಎರಡನೇ ಮದುವೆ ಆಗದಿದ್ದರೆ ಗುಟ್ಟು ರಟ್ಟು ಮಾಡುವುದಾಗಿ ಧಮ್ಕಿ ಹಾಕಿದ್ದ ರಾಮ್ ಸಿನ್ಹಾ

ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ವೃತ್ತಿಜೀವನ ಎಷ್ಟು ವರ್ಣರಂಜಿತವೋ ಅವರ ವೈಯಕ್ತಿಕ ಜೀವನವೂ ಅಷ್ಟೇ ವಿವಾದಗಳಿಂದ ಕೂಡಿತ್ತು. ವಿಶೇಷವಾಗಿ ನಟಿ ರೀನಾ ರಾಯ್ ಮತ್ತು ಶತ್ರುಘ್ನ ಸಿನ್ಹಾ ಅವರ ಸಂಬಂಧ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಪ್ರೇಮ ಕಥೆಯಲ್ಲಿ ಯಾರೂ ಊಹಿಸದಂತಹ ತಿರುವು ಎದುರಾಗಿತ್ತು ಎಂಬ ಸತ್ಯ ಈಗ ಹೊರಬಿದ್ದಿದೆ. ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ, ನಟನ ಸ್ವಂತ ಅಣ್ಣ ರಾಮ್ ಸಿನ್ಹಾ ಅವರು ರೀನಾ ರಾಯ್ ಅವರನ್ನು ಮದುವೆಯಾಗುವಂತೆ ತಮ್ಮನ ಮೇಲೆ ತೀವ್ರ ಒತ್ತಡ ಹೇರಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಧರ್ಮೇಂದ್ರ ಮಾದರಿ ಅನುಸರಿಸಲು ಒತ್ತಾಯ ಭಾರತಿ ಎಸ್ ಪ್ರಧಾನ್ ಅವರು ಬರೆದ ಶತ್ರುಘ್ನ ಸಿನ್ಹಾ ಅವರ ಜೀವನಚರಿತ್ರೆಯಲ್ಲಿ ಈ ಘಟನೆಯನ್ನು ವಿವರಿಸಲಾಗಿದೆ. 1980ರ ದಶಕದಲ್ಲಿ ಪೂನಂ ಮತ್ತು ಶತ್ರುಘ್ನ ಸಿನ್ಹಾ ದಂಪತಿ ತಮ್ಮ ಮೊದಲ ಮಕ್ಕಳಾದ ಲವ್ ಮತ್ತು ಕುಶ್ ಅವರ ಆಗಮನದ ನಿರೀಕ್ಷೆಯಲ್ಲಿದ್ದರು. ಇದೇ ವೇಳೆ ಶತ್ರುಘ್ನ ಸಿನ್ಹಾ ಅವರ ಅಣ್ಣ ರಾಮ್ ಸಿನ್ಹಾ ಅವರು ರೀನಾ ರಾಯ್ ಜೊತೆಗಿನ ತಮ್ಮನ ಸಂಬಂಧವನ್ನು ಸಕ್ರಮಗೊಳಿಸಲು ಮುಂದಾಗಿದ್ದರು. ನಟ ಧರ್ಮೇಂದ್ರ ಅವರು ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಗೆ ವಿಚ್ಛೇದನ ನೀಡದೆಯೇ ಹೇಮಾ ಮಾಲಿನಿ ಅವರನ್ನು ಮದುವೆಯಾದಂತೆ ನೀನು ಯಾಕೆ ಮಾಡಬಾರದು ಎಂದು ಅಣ್ಣ ತಮ್ಮನಿಗೆ ಪ್ರಶ್ನೆ ಮಾಡಿದ್ದರು.

ರಹಸ್ಯ ಪತ್ರದಿಂದ ಎದುರಾದ ಸಂಕಷ್ಟ ಕೇವಲ ಮೌಖಿಕ ಒತ್ತಡ ಮಾತ್ರವಲ್ಲದೆ ಶತ್ರುಘ್ನ ಸಿನ್ಹಾ ಅವರ ಅಣ್ಣ ಒಂದು ಹೆಜ್ಜೆ ಮುಂದೆ ಹೋಗಿ ನಟನ ಸಂಬಂಧದ ಬಗ್ಗೆ ಸವಿವರವಾದ ಪತ್ರವೊಂದನ್ನು ಸಿದ್ಧಪಡಿಸಿದ್ದರು. ಈ ಪತ್ರವನ್ನು ಕುಟುಂಬದ ಸದಸ್ಯರಿಗೆ ಮತ್ತು ನಿಕಟವರ್ತಿಗಳಿಗೆ ಕಳುಹಿಸಿ ವಿಷಯವನ್ನು ಬಹಿರಂಗಪಡಿಸಲು ರಾಮ್ ಸಿನ್ಹಾ ನಿರ್ಧರಿಸಿದ್ದರು. ಆದರೆ ಅದೃಷ್ಟವಶಾತ್ ಶತ್ರುಘ್ನ ಸಿನ್ಹಾ ಅವರ ಆಪ್ತ ಕಾರ್ಯದರ್ಶಿ ಪವನ್ ಕುಮಾರ್ ಅವರು ಪತ್ರವನ್ನು ಮೊದಲೇ ನೋಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದ ನಟನ ದಾಂಪತ್ಯ ಜೀವನ ಬೀದಿಗೆ ಬರುವುದು ತಪ್ಪಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂಟು ದಿನಗಳ ಗಡುವು ನೀಡಿದ್ದ ರೀನಾ ರಾಯ್ ನಿರ್ಮಾಪಕ ಪಹ್ಲಾಜ್ ನಿಹಲಾನಿ ಅವರ ಪ್ರಕಾರ ನಟಿ ರೀನಾ ರಾಯ್ ಕೂಡ ಮದುವೆಯ ವಿಚಾರದಲ್ಲಿ ಪಟ್ಟು ಹಿಡಿದಿದ್ದರು. ಶತ್ರುಘ್ನ ಸಿನ್ಹಾ ತನ್ನನ್ನು ಮದುವೆಯಾಗದಿದ್ದರೆ ಮುಂದಿನ ಎಂಟು ದಿನಗಳಲ್ಲಿ ಬೇರೆಯವರನ್ನು ವರಿಸುವುದಾಗಿ ಅವರು ಅಲ್ಟಿಮೇಟಂ ನೀಡಿದ್ದರು. ಮುಂದೆ ಅವರು ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ಮದುವೆಯಾಗಿ ಆ ಸಂಬಂಧ ಮುರಿದುಬಿದ್ದಿದ್ದು ಈಗ ಇತಿಹಾಸ. ಅಂತಿಮವಾಗಿ ಶತ್ರುಘ್ನ ಸಿನ್ಹಾ ಅವರು ಪತ್ನಿ ಪೂನಂ ಅವರೊಂದಿಗಿನ ಸಂಸಾರವನ್ನು ಮುಂದುವರಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular