ನಟ ಧ್ರುವ ಸರ್ಜಾ ಅಭಿನಯದ, ‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ- ದಿ ಡೆವಿಲ್’ ಚಿತ್ರದ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಈ ಹಾಡಿನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯ ಸಾಂವಿಧಾನಿಕ ಮಿತಿಗಳಿಗೆ ಒಳಪಟ್ಟಿರುತ್ತದೆ. ಸಂವಿಧಾನ ಸೂಚಿಸಿದ ನಿರ್ಬಂಧಗಳ ವ್ಯಾಪ್ತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ವಿವಾದಿತ ಹಾಡನ್ನು ಹಿಂಪಡೆದುಕೊಂಡು ಹೊಸ ಹಾಡು ಬರೆಯುತ್ತೇನೆ. ಈ ಹಾಡಿನಿಂದ ನೋವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದು ನಿರ್ದೇಶಕ ಜೋಗಿ ಪ್ರೇಮ್ ಹೇಳಿದ್ದಾರೆ. ದೇಶಾದ್ಯಂತ ಹಾಡಿಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಯಾರೂ ಬೇಕೆಂದು ತಪ್ಪು ಮಾಡುವುದಿಲ್ಲ. ಬಾಟಲ್ ಪದವನ್ನು ಬಳಸದ ಕಾರಣ ತಪ್ಪಾಗಿದೆ ಎಂದು ಹೇಳಿದ್ದಾರೆ.
ಯಾರನ್ನೋ ನೋಯಿಸಬೇಕು, ತೊಂದರೆ ಕೊಡಬೇಕು ಎನ್ನುವ ಉದ್ದೇಶದಿಂದ ಹಾಡು ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಜೋಗಿ ಪ್ರೇಮ್, ಯಾವ ಅರ್ಥದಲ್ಲಿ ಹಾಡನ್ನು ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಹಿಂದಿಯ ಕೆಲವು ಪದಗಳು ನನಗೆ ಅರ್ಥವಾಗುವುದಿಲ್ಲ. ಹಾಗಾಗಿ ನನಗೆ ಹಿಂದಿ ಹಾಡು ಪೂರ್ತಿ ಅರ್ಥವಾಗಿರಲಿಲ್ಲ. ಹೊಸ ಹಾಡನ್ನು ಬರೆದು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

