ಶಾಓಲಿನ್ ಸನ್ಯಾಸಿಗಳ ಜೊತೆ ರೋಬೋಟ್‌ಗಳ ಫೈಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಚೀನಾದ ಹೆನಾನ್ ಪ್ರಾಂತ್ಯದ ವಿಶ್ವಪ್ರಸಿದ್ಧ ಶಾಓಲಿನ್ ದೇವಸ್ಥಾನವೊಂದು ಇದೀಗ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಶತಶತಮಾನಗಳಿಂದ ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿದ್ದ ಕಠಿಣ ‘ಶಾಓಲಿನ್ ಕುಂಗ್ ಫೂ’ ಸಮರ ಕಲೆಯನ್ನು ಇದೀಗ ಹ್ಯೂಮನಾಯ್ಡ್ ರೋಬೋಟ್‌ಗಳು ಕಲಿಯುತ್ತಿವೆ. ಅಲ್ಲಿನ ಬೌದ್ಧ ಸನ್ಯಾಸಿಗಳ ಜೊತೆಗೂಡಿ ಯಂತ್ರಮಾನವರು ಸಮರ ಕಲೆಯ ಪಟ್ಟುಗಳನ್ನು ಪ್ರದರ್ಶಿಸುತ್ತಿರುವ ದೃಶ್ಯಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಸನ್ಯಾಸಿಗಳ ಚಲನವಲನಗಳನ್ನು ರೋಬೋಟ್‌ಗಳು ಅತ್ಯಂತ ನಿಖರವಾಗಿ ಅನುಕರಿಸುತ್ತಿವೆ. ಒಬ್ಬ ಗುರು ತನ್ನ ಶಿಷ್ಯನಿಗೆ ಕಲಿಸುವಂತೆಯೇ ಇಲ್ಲಿ ಸನ್ಯಾಸಿಗಳು ರೋಬೋಟ್‌ಗಳಿಗೆ ಕುಂಗ್ ಫೂ ಅಭ್ಯಾಸ ಮಾಡಿಸುತ್ತಿದ್ದಾರೆ. ಕೇವಲ ಮೌಖಿಕ ಸೂಚನೆಗಳಿಗಷ್ಟೇ ಸೀಮಿತವಾಗದೆ ಕುಂಗ್ ಫೂನಲ್ಲಿರುವ ಅತ್ಯಂತ ಕಠಿಣವಾದ ಭಂಗಿಗಳು ಮತ್ತು ಸಮರ ಕಲೆಯ ಶಿಸ್ತನ್ನು ಈ ರೋಬೋಟ್‌ಗಳು ಮೈಗೂಡಿಸಿಕೊಳ್ಳುತ್ತಿರುವುದು ವಿಜ್ಞಾನದ ಪ್ರಗತಿಗೆ ಸಾಕ್ಷಿಯಾಗಿದೆ.

ಈ ವಿಡಿಯೋ ಕಂಡು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಮನುಷ್ಯರಿಗೇ ಅಸಾಧ್ಯವಾದ ಇಂತಹ ಕಠಿಣ ಕಲೆಯ ಪಟ್ಟುಗಳನ್ನು ರೋಬೋಟ್‌ಗಳು ಇಷ್ಟು ಸುಲಭವಾಗಿ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಂತ್ರಜ್ಞಾನದ ಈ ಅತಿಯಾದ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಮಾನವ ಸಂಸ್ಕೃತಿ ಮತ್ತು ಕಲೆಗಳ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರಾಚೀನ ಪರಂಪರೆ ಮತ್ತು ಆಧುನಿಕ ರೋಬೋಟಿಕ್ಸ್ ತಂತ್ರಜ್ಞಾನದ ಈ ಅನಿರೀಕ್ಷಿತ ಮಿಲನವು ಭವಿಷ್ಯದಲ್ಲಿ ಕಲೆ ಮತ್ತು ತಂತ್ರಜ್ಞಾನ ಹೇಗೆ ಒಂದಕ್ಕೊಂದು ಪೂರಕವಾಗಿ ಬೆಳೆಯಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಶಾಓಲಿನ್ ದೇವಸ್ಥಾನದ ಇತಿಹಾಸದಲ್ಲೇ ಇದೊಂದು ಹೊಸ ಅಧ್ಯಾಯವೆಂದು ಪರಿಗಣಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read