HomeLatest Newsಲೇಡಿ ಡೈರೆಕ್ಟರ್‌ನಿಂದ ಅಂಥ ದೃಶ್ಯ, ಆಕೆ ಮುಂದೆ ಯಾವ ಗಂಡಸೂ ಇಲ್ಲ: ಟಾಕ್ಸಿಕ್ ಟೀಸರ್‌ ಬಗ್ಗೆ...

ಲೇಡಿ ಡೈರೆಕ್ಟರ್‌ನಿಂದ ಅಂಥ ದೃಶ್ಯ, ಆಕೆ ಮುಂದೆ ಯಾವ ಗಂಡಸೂ ಇಲ್ಲ: ಟಾಕ್ಸಿಕ್ ಟೀಸರ್‌ ಬಗ್ಗೆ ರಾಮ್‌ಗೋಪಾಲ್ ವರ್ಮಾ ಪ್ರತಿಕ್ರಿಯೆ

ಇಂದು ( ಜನವರಿ ೮ ) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಟೀಸರ್ ಬಿಡುಗಡೆಯಾಗಿದೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ಚಿತ್ರದಲ್ಲಿ ನಟಿಸಿರುವ ನಟಿಯರ ಪಾತ್ರಗಳನ್ನು ಪರಿಚಯಿಸಿದ್ದ ಚಿತ್ರತಂಡ ನಾಯಕನ ಪಾತ್ರವನ್ನು ಈ ಟೀಸರ್ ಮೂಲಕ ಪರಿಚಯಿಸಿದೆ. ಚಿತ್ರದಲ್ಲಿ ಯಶ್ ರಾಯ ಎಂಬ ಪಾತ್ರದಲ್ಲಿ ನಟಿಸಿದ್ದು, ಈ ಒಂದು ಪಾತ್ರವನ್ನು ನಿರ್ದೇಶಕಿ ಸಿಕ್ಕಾಪಟ್ಟೆ ಖಡಕ್ ಆಗಿ ಪರಿಚಯಿಸಿದ್ದಾರೆ.

ಚಿತ್ರದಲ್ಲಿ ಯಶ್ ಪ್ಲೇ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಪ್ರೇಕ್ಷಕರಿಗೆ ತಿಳಿಸುವ ಸಲುವಾಗಿ ಟೀಸರ್‌ನಲ್ಲಿ ವಯಸ್ಕರಿಗೆ ಮಾತ್ರ ಎಂಬಂತಹ ದೃಶ್ಯಗಳೂ ಸಹ ಇವೆ. ಈ ದೃಶ್ಯದ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಟೀಕೆಗಳೂ ಸಹ ವ್ಯಕ್ತವಾಗುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಟೀಸರ್ ಕುರಿತು ತನ್ನ ಅಧಿಕೃತ ಖಾತೆಯಲ್ಲಿ ತೆಲುಗು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಸಹ ಬರೆದುಕೊಂಡಿದ್ದು, ‘ಯಶ್ ನಟನೆಯ ಟಾಕ್ಸಿಕ್ ಟೀಸರ್ ನೋಡಿದ ಬಳಿಕ ಗೀತು ಮೋಹನ್ ದಾಸ್ ಮಹಿಳಾ ಸಬಲೀಕರಣದ ಚಿಹ್ನೆ ಎಂಬುದರ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಈ ಮಹಿಳೆಯ ಜತೆ ಹೋಲಿಕೆ ಮಾಡುವಷ್ಟು ಯಾವ ಪುರುಷ ನಿರ್ದೇಶಕನೂ ಸಹ ಇಲ್ಲ. ಅದನ್ನು ಚಿತ್ರೀಕರಿಸಿದ್ದು ಈಕೆ ಎಂದು ಈಗಲೂ ಸಹ ನನಗೆ ನಂಬಲಾಗುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular