ಅಮೆರಿಕಾದಲ್ಲಿ ಬಳಕೆದಾರರೊಬ್ಬರು ತಮ್ಮ ಎರಡು ತಿಂಗಳ ಹಳೆಯ ಗ್ಯಾಲಕ್ಸಿ S25+ ಫೋನ್ ಅನ್ನು ರಾತ್ರಿ ಚಾರ್ಜಿಂಗ್‌ಗೆ ಇಟ್ಟಿದ್ದಾಗ ಅದು ಸ್ಫೋಟಗೊಂಡಿದೆ.ಫೋನ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಮಾತ್ರವಲ್ಲದೆ, ಮನೆಯ ಕಾರ್ಪೆಟ್ ಕೂಡ ಸುಟ್ಟಿದೆ.
ಮನೆಯಲ್ಲಿದ್ದವರು ಹೊಗೆಯಿಂದಾಗಿ ಉಸಿರಾಟದ ತೊಂದರೆ ಅನುಭವಿಸಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.ಅಗ್ನಿಶಾಮಕ ದಳವು ಇದನ್ನು “ಥರ್ಮಲ್ ರನ್‌ಅವೇ” (Thermal Runaway) ಘಟನೆ ಎಂದು ದೃಢಪಡಿಸಿದೆ. ಬಳಕೆದಾರರು ಕಂಪನಿಯ ಅಧಿಕೃತ ಚಾರ್ಜರ್ ಮತ್ತು ಕೇಬಲ್ ಅನ್ನೇ ಬಳಸುತ್ತಿದ್ದರು ಎಂದು ಸಾಬೀತಾಗಿದೆ.
ಕಂಪನಿಯ ನಿರ್ಧಾರ: ಸ್ಯಾಮ್‌ಸಂಗ್ ಈ ಘಟನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಬಳಕೆದಾರರಿಗೆ ಈ ಕೆಳಗಿನ ಪರಿಹಾರಗಳನ್ನು ನೀಡಲು ಒಪ್ಪಿಕೊಂಡಿದೆ.
ಫೋನ್‌ನ ಪೂರ್ಣ ಹಣದ ಮರುಪಾವತಿ : ಆಸ್ಪತ್ರೆಯ ವೆಚ್ಚ ಮತ್ತು ಮನೆಯನ್ನು ಸ್ವಚ್ಛಗೊಳಿಸಲು ತಗುಲಿದ ವೆಚ್ಚದ ಭರಿಸುವಿಕೆ.
ಮಾನಸಿಕ ಆಘಾತ ಮತ್ತು ತೊಂದರೆಗಾಗಿ (Pain and Suffering) ಸರಿಸುಮಾರು $500 (ಸುಮಾರು ₹41,000) ಹೆಚ್ಚುವರಿ ಪರಿಹಾರ.
ಸ್ಯಾಮ್‌ಸಂಗ್ ಕಂಪನಿಯು ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದು, ಇದು ಒಂದು ಪ್ರತ್ಯೇಕ ಘಟನೆಯಾಗಿದ್ದು ಬೇರೆ ಸಾಧನಗಳಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸೂಚನೆ: ಯಾವಾಗಲೂ ಕಂಪನಿಯ ಅಧಿಕೃತ ಚಾರ್ಜರ್‌ಗಳನ್ನೇ ಬಳಸುವುದು ಉತ್ತಮ. ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುತ್ತಿದ್ದರೆ ತಕ್ಷಣ ಚಾರ್ಜಿಂಗ್ ನಿಲ್ಲಿಸಿ.

