ಬೆಳಗ್ಗೆ ಎದ್ದ ಕೂಡಲೇ ಸ್ನೂಜ್ ಬಟನ್ ಒತ್ತೋದ್ರಿಂದ ಹಿಡಿದು, ಆಫೀಸ್ ಅಥವಾ ಸ್ಕೂಲ್ ಬಸ್ ಹಿಡಿಯೋವರೆಗೆ ನಾವು ಪ್ರತಿ ಸೆಕೆಂಡಿಗೂ ಗಡಿಯಾರದ ಗುಲಾಮರು ಒಂದೇ ಒಂದು ನಿಮಿಷ ಮಿಸ್ ಆದ್ರೂ ಇಡೀ ದಿನವೇ ಹಳಿ ತಪ್ಪಿದಂತಾಗುತ್ತೆ. ಆದ್ರೆ ಫ್ರೆಂಡ್ಸ್, ಈ ಡಿಜಿಟಲ್ ಕಾಲಕ್ಕೂ ಮುನ್ನ, ಅಂದ್ರೆ ನಮ್ಮ ಅಜ್ಜ-ಮುತ್ತಜ್ಜರ ಕಾಲದಲ್ಲಿ ಅಲಾರಾಂಗಳೇ ಇಲ್ಲದೆ ಇಡೀ ಜಗತ್ತು ಎಷ್ಟು ಪರ್ಫೆಕ್ಟ್ ಆಗಿ ಓಡ್ತಿತ್ತು ಗೊತ್ತಾ? ಇವತ್ತು ಜೇಬಿಂದ ಫೋನ್ ತೆಗೆದ್ರೆ ಸಾಕು ಟೈಮ್ ಗೊತ್ತಾಗುತ್ತೆ. ಆದ್ರೆ ಅಂದು ಯಾವುದೇ ಗ್ಯಾಜೆಟ್‌ಗಳಿಲ್ಲದಿದ್ದರೂ ನಮ್ಮ ಪೂರ್ವಜರು ಪ್ರಕೃತಿಯನ್ನೇ ಗಡಿಯಾರವನ್ನಾಗಿ ಮಾಡಿಕೊಂಡಿದ್ದರು ಹಬ್ಬಗಳಿರಲಿ ಅಥವಾ ಕೆಲಸದ ಅವಧಿಯಿರಲಿ, ಅವರು ಬಳಸ್ತಿದ್ದ ಆ ಬ್ರೈಂಟ್ ಐಡಿಯಾಗಳು ಮತ್ತು ಕುತೂಹಲಕಾರಿ ಸಂಪ್ರದಾಯಗಳ ಬಗ್ಗೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ
ಸನ್ ಡಯಲ್ (Sundial): ಸೂರ್ಯನೇ ಗಡಿಯಾರ
ಇದು ಜಗತ್ತಿನ ಅತ್ಯಂತ ಹಳೆಯ ಕಾಲಗಣನಾ ಪದ್ಧತಿ. ಸುಮಾರು ಕ್ರಿಸ್ತಪೂರ್ವ 1500 ರಲ್ಲೇ ಈಜಿಪ್ಟಿನವರು ಇದನ್ನು ಬಳಸುತ್ತಿದ್ದರು. ಒಂದು ಸಮತಟ್ಟಾದ ಮೇಲ್ಮೈ ಮೇಲೆ ಗ್ನೋಮನ್ ಎಂಬ ಕೋಲನ್ನು ಇಡಲಾಗುತ್ತಿತ್ತು. ಸೂರ್ಯ ಆಕಾಶದಲ್ಲಿ ಚಲಿಸಿದಂತೆ ಈ ಕೋಲಿನ ನೆರಳು ಕೂಡ ಚಲಿಸುತ್ತಿತ್ತು. ಆ ನೆರಳು ಎಲ್ಲಿ ಬೀಳುತ್ತದೆ ಎನ್ನುವುದನ್ನು ನೋಡಿ ಸಮಯ ತಿಳಿಯುತ್ತಿದ್ದರು. ಇವು ಕೇವಲ ಗಡಿಯಾರಗಳಲ್ಲ, ಅಂದಿನ ಕಾಲದ ಅದ್ಭುತ ಕಲಾಕೃತಿಗಳೂ ಆಗಿದ್ದವು
2.ವಾಟರ್ ಕ್ಲಾಕ್ (Water Clocks): ಹನಿ ಹನಿ ಸಮಯ
ಗ್ರೀಕ್ ಮತ್ತು ಚೀನಿಯರು ಬಳಸುತ್ತಿದ್ದ ಈ ಗಡಿಯಾರಕ್ಕೆ ಕ್ಲೆಪ್ಸಿಡ್ರಾಸ್ ಎಂದು ಹೆಸರಿತ್ತು. ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ನೀರು ನಿಯಂತ್ರಿತ ವೇಗದಲ್ಲಿ ಬೀಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಹೊಲಗಳಿಗೆ ನೀರು ಬಿಡಲು ಅಥವಾ ಸಭೆಗಳಲ್ಲಿ ಭಾಷಣದ ಸಮಯವನ್ನು ನಿರ್ಧರಿಸಲು ಈ ನೀರಿನ ಗಡಿಯಾರಗಳು ಬಳಕೆಯಾಗುತ್ತಿದ್ದವು.
3.ಮರಳು ಗಡಿಯಾರ (Hourglasses): ಕಾಲದ ಸುಂದರ ಸಂಕೇತ
ಮಧ್ಯಕಾಲೀನ ಯುಗದಲ್ಲಿ ಜನಪ್ರಿಯವಾದ ಈ ಸಾಧನ ಇಂದಿಗೂ ಕಾಲದ ಸಂಕೇತವಾಗಿ ಬಳಕೆಯಲ್ಲಿದೆ. ಎರಡು ಗಾಜಿನ ಬುರುಡೆಗಳ ನಡುವೆ ಸಣ್ಣ ಕುತ್ತಿಗೆಯಂಥ ಭಾಗವಿರುತ್ತದೆ. ಮೇಲಿನಿಂದ ಕೆಳಕ್ಕೆ ಮರಳು ಬೀಳುವ ವೇಗವನ್ನು ಆಧರಿಸಿ ಸಮಯ ಲೆಕ್ಕ ಹಾಕಲಾಗುತ್ತಿತ್ತು. ಅಡುಗೆ ಮಾಡಲು ಅಥವಾ ಸಮುದ್ರ ಪ್ರಯಾಣದಲ್ಲಿ ಇವು ಬಹಳ ಉಪಯುಕ್ತವಾಗಿದ್ದವು.
4.ಆಕಾಶದ ಅದ್ಭುತ ವೀಕ್ಷಣೆ (Astronomical Observations)
ಯಾಂತ್ರಿಕ ಗಡಿಯಾರಗಳು ಬರುವ ಮೊದಲು ಮನುಷ್ಯ ನಂಬಿದ್ದ ಒಂದೇ ಒಂದು ದೊಡ್ಡ ಸ್ಕ್ರೀನ್ ಎಂದರೆ ಅದು ಆಕಾಶ.ಸೂರ್ಯ ಮತ್ತು ಚಂದ್ರನ ಚಲನೆಯನ್ನು ನೋಡಿ ಅತ್ಯಂತ ನಿಖರವಾದ ಕ್ಯಾಲೆಂಡರ್ ತಯಾರಿಸಿದ್ದರು.
ಈಜಿಪ್ಟಿನವರು: ಸಿರಿಯಸ್ ನಕ್ಷತ್ರ ಉದಯವಾಗುವುದನ್ನು ನೋಡಿ ನೈಲ್ ನದಿಯ ಪ್ರವಾಹವನ್ನು ಮೊದಲೇ ಊಹಿಸುತ್ತಿದ್ದರು. ಸೂರ್ಯನ ಉದಯ-ಅಸ್ತ ಮತ್ತು ಚಂದ್ರನ ಕಲೆಗಳೇ ಅಂದು ಕೃಷಿ ಮತ್ತು ಹಬ್ಬಗಳಿಗೆ ಆಧಾರವಾಗಿದ್ದವು.
5.ಮೆಕಾನಿಕಲ್ ಗಡಿಯಾರಗಳ ಎಂಟ್ರಿ (Mechanical Clocks)
14ನೇ ಶತಮಾನದಲ್ಲಿ ಗಡಿಯಾರಗಳ ಲೋಕದಲ್ಲಿ ದೊಡ್ಡ ಬದಲಾವಣೆ ಆಯಿತು. ಮೊದಲು ಚರ್ಚ್ ಗೋಪುರಗಳಲ್ಲಿ ಈ ಯಾಂತ್ರಿಕ ಗಡಿಯಾರಗಳನ್ನು ಅಳವಡಿಸಲಾಯಿತು. ಇವುಗಳಲ್ಲಿ ಗೇರ್‌ಗಳು ತೂಕಗಳು ಮತ್ತು ಎಸ್ಕೇಪ್‌ಮೆಂಟ್‌ಗಳನ್ನು ಬಳಸಿ ಸಮಯವನ್ನು ನಿಖರವಾಗಿ ಅಳೆಯಲು ಆರಂಭಿಸಲಾಯಿತು.

