HomeLatest Newsಬೆಳ್ಳಿ ಹೂಡಿಕೆದಾರರೇ ಹುಷಾರ್ ದೊಡ್ಡ ಮಟ್ಟದ ಕುಸಿತದ ಮುನ್ಸೂಚನೆ ನೀಡಿದ ರಾಬರ್ಟ್ ಕಿಯೋಸಾಕಿ.

ಬೆಳ್ಳಿ ಹೂಡಿಕೆದಾರರೇ ಹುಷಾರ್ ದೊಡ್ಡ ಮಟ್ಟದ ಕುಸಿತದ ಮುನ್ಸೂಚನೆ ನೀಡಿದ ರಾಬರ್ಟ್ ಕಿಯೋಸಾಕಿ.

ಬೆಳ್ಳಿ ಬೆಲೆಯು ಆಕಾಶಕ್ಕೆ ಏಣಿಯಿಡುತ್ತಿರುವ ಹೊತ್ತಲ್ಲೇ ಹೂಡಿಕೆದಾರರ ಎದೆಯಲ್ಲಿ ನಡುಕ ಶುರುವಾಗಿದೆ ರಿಚ್ ಡ್ಯಾಡ್ ಪೂರ್ ಡ್ಯಾಡ್ ಖ್ಯಾತಿಯ ವಿಶ್ವಪ್ರಸಿದ್ಧ ಲೇಖಕ ರಾಬರ್ಟ್ ಕಿಯೋಸಾಕಿ ನೀಡಿರುವ ಒಂದು ಎಚ್ಚರಿಕೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಬೆಳ್ಳಿ ಸದ್ಯಕ್ಕೆ ತನ್ನ ಗರಿಷ್ಠ ಮಟ್ಟವನ್ನು ತಲುಪಿದ್ದು, ಶೀಘ್ರದಲ್ಲೇ ಭಾರಿ ಕುಸಿತ (Pullback) ಕಾಣಲಿದೆ ಎಂದು ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಹೂಡಿಕೆದಾರರಿಗೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿರುವ ಅವರು ಈ ಲಾಭದ ಅಲೆಯ ಬೆನ್ನಲ್ಲೇ ಬೆಲೆ ಇಳಿಕೆಯ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಯಾವಾಗ ಇಳಿಕೆ? ಕಿಯೋಸಾಕಿ ಲೆಕ್ಕಾಚಾರವೇನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಒಂದು ಔನ್ಸ್‌ಗೆ ಸುಮಾರು 89-90 ಡಾಲರ್ ಆಸುಪಾಸಿನಲ್ಲಿದೆ. ಕಿಯೋಸಾಕಿ ಅವರ ಪ್ರಕಾರ, ಬೆಲೆ ಇನ್ನು ಶೇ. 10ರಷ್ಟು ಏರಿಕೆಯಾದ ನಂತರ ದೊಡ್ಡ ಮಟ್ಟದ ಪ್ರೈಸ್ ಕರೆಕ್ಷನ್ ಅಥವಾ ಕುಸಿತ ಕಾಣಲಿದೆ. ಬೆಲೆ ಏರಿರುವುದರಿಂದ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮುಗಿಬಿದ್ದು ಬೆಳ್ಳಿ ಮಾರಾಟ ಮಾಡುವುದೇ ಈ ಕುಸಿತಕ್ಕೆ ಪ್ರಮುಖ ಕಾರಣವಾಗಲಿದೆ ಎಂಬುದು ಅವರ ವಾದ.

1960ರ ದಶಕದಲ್ಲಿ ಒಂದು ಔನ್ಸ್‌ಗೆ ಕೇವಲ 1 ಡಾಲರ್ ಇದ್ದಾಗ ತಾವು ಮೊದಲ ಬಾರಿಗೆ ಬೆಳ್ಳಿ ಖರೀದಿಸಿದ್ದಾಗಿ ಕಿಯೋಸಾಕಿ ನೆನಪಿಸಿಕೊಂಡಿದ್ದಾರೆ. ಕಳೆದ ವರ್ಷ ಬೆಳ್ಳಿ ಬೆಲೆಯು ಚಿನ್ನಕ್ಕಿಂತ ವೇಗವಾಗಿ ಅಂದರೆ ಸುಮಾರು ಶೇ. 150 ರಷ್ಟು ಜಿಗಿತ ಕಂಡಿತ್ತು

ಬೆಳ್ಳಿ ಮಾರಾಟ ಮಾಡಿ ಹಣ (ಡಾಲರ್) ಪಡೆಯುವುದು ಸರಿಯಾದ ನಿರ್ಧಾರವಲ್ಲ ಎನ್ನುವ ಕಿಯೋಸಾಕಿ, ಬೆಳ್ಳಿ ಬೆಲೆ ಔನ್ಸ್‌ಗೆ 100 ಡಾಲರ್ ಆಗುವವರೆಗೂ ತಾವು ಖರೀದಿ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಬೆಳ್ಳಿ ಮಾರಾಟ ಮಾಡಿದರೂ ಆ ಹಣವನ್ನು ಮತ್ತೆ ಚಿನ್ನದ ಮೇಲೆಯೇ ಹೂಡಿಕೆ ಮಾಡುವುದು ಜಾಣತನ ಎಂದು ಅವರು ಸಲಹೆ ನೀಡಿದ್ದಾರೆ. ಬೆಲೆ ಕುಸಿದು ಮಾರುಕಟ್ಟೆ ಸ್ಥಿರವಾದ ಬಳಿಕ ತಾವು ಮತ್ತೆ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದಾಗಿ ಅವರು ಸುಳಿವು ನೀಡಿದ್ದಾರೆ.

ಕಿಯೋಸಾಕಿ ಅವರ ಈ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಕೆಲವರು ಇವರನ್ನು ಬೆಂಬಲಿಸಿದರೆ ಇನ್ನು ಕೆಲವರು ಮಾರುಕಟ್ಟೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಷೇರು ಮಾರುಕಟ್ಟೆ ಒಂದು ದೊಡ್ಡ ಬಲೂನಿನಂತೆ ಎಂದು ವಾದಿಸುವ ಕಿಯೋಸಾಕಿ, ಹಣದುಬ್ಬರದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಮಾತ್ರ ಸುಭದ್ರ ಹೂಡಿಕೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular