HomeLatest Newsಖತರ್ನಾಕ್ ಮನೆಗಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಖಾಕಿ ಪಡೆ: ವಿಚಾರಣೆ ವೇಳೆ ಪೊಲೀಸರೇ ಶಾಕ್!

ಖತರ್ನಾಕ್ ಮನೆಗಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದ ಖಾಕಿ ಪಡೆ: ವಿಚಾರಣೆ ವೇಳೆ ಪೊಲೀಸರೇ ಶಾಕ್!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗೆ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಖಾಕಿಗಳೇ ಶಾಕ್ ಆಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಗೆ ಬಂದ ಕಳ್ಳರಿಬ್ಬರ ವೇಷವೇ ಬದಲಾಗಿ ಹೋಗಿದೆ. ಬಂಧಿಸಿ ಕರೆತಂದ ಆರೋಪಿಗಳು ಕಳ್ಳರಲ್ಲ, ಕಳ್ಳಿಯರು ಎಂಬುದು ತಿಳಿದು ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.

ಇಬ್ಬರು ಯುವತಿಯರು ಪಕ್ಕಾ ಹುಡುಗರಂತೆ ಶರ್ಟ್, ಪ್ಯಾಂಟ್ ಧರಿಸಿ ಸ್ಟೈಲಿಶ್ ಆಗಿ ಓಡಾಡಿ ಹಾಡಹಗಲೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಏರಿಯಾಗಳಲ್ಲಿ ಕೆಲಸಕ್ಕೆ ಹೋಗುವವರ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡುತ್ತಿದ್ದರು. ಹುಡುಗರಂತೆ ವೇಷ ಧರಿಸಿ ಬೈಕ್ ಗಳಲ್ಲಿ ಓಡಾಡಿ ಮನೆಗಳನ್ನು ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯೇ ಮನೆಗಳಿಗೆ ನುಗ್ಗುತ್ತಿದ್ದ ಯುವತಿಯರಿಬ್ಬರೂ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನವರ್ 13ರಂದು ಯಲಹಂಕದ ಅಗ್ರಹಾರ ಲೇಔಟ್ ನಲ್ಲಿ ಆಟೋ ಚಾಲಕ ಸಂಗಮೇಶ್ ಎಂಬುವವರ ಮನೆಗೆ ನುಗ್ಗಿದ ಕಳ್ಳಿಯರು ಹಾಡಹಗಲೇ ಮನೆಗೆ ಕನ್ನ ಹಾಕಿ ಹಣ, ಚಿನ್ನಾಭರಣ, ಇತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಮನೆಗೆ ವಾಪಸ್ ಆದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಸಂಗಮೇಶ್ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಕಳ್ಳತನ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳ್ಳರ ಬೈಕ್ ನಂಬರ್ ಸಿಸಿಟಿಯಲ್ಲಿ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ. ಈ ವೇಳೆ ಠಾಣೆಗೆ ಕರೆತಂದು ವಿಚಾರಿಸಿದಾಗ ಅವರು ಕಳ್ಳರಲ್ಲ, ಕಳ್ಳಿಯರು ಎಂಬುದು ಬಯಲಾಗಿದೆ. ಹುಡುಗರಂತೆ ವೇಷ ಹಾಕಿ ಯುವತಿಯರಿಬ್ಬರು ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular