ಹುಬ್ಬಳ್ಳಿಯಲ್ಲಿ ನಡೆದ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ನಿಗದಿತ ಸಮಯದಲ್ಲಿ ಪಂದ್ಯದ ಫಲಿತಾಂಶ ಬಾರದ ಕಾರಣ ಅಂತ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಹೀಗೆ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಮೊದಲ ಇನ್ನಿಂಗ್ಸಿನಲ್ಲಿ ಲೀಡ್ ಪಡೆದುಕೊಂಡ ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಣಜಿ ಟ್ರೋಫಿಯಲ್ಲಿ ಇದೆ ಮೊದಲ ಬಾರಿಗೆ ಫೈನಲ್ ತಲುಪಿದ್ದ ಜಮ್ಮು-ಕಾಶ್ಮೀರ ಗೆದ್ದು ಬೀಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲ ಇನ್ನಿಂಗ್ಸ್ ನಲ್ಲಿ ಶುಭಂ ಪಂದಿರ್ ಶತಕ ಹಾಗೂ ಐವರು ಆಟಗಾರರ ಅರ್ಧಶತಕಗಳ ನೆರವಿನಿಂದ 584 ರನ್ ಕಲೆ ಹಾಕಿತು. ಇತ್ತ ಕರ್ನಾಟಕದ ಪರ ಮಯಂಕ್ ಅಗರ್ವಾಲ್ ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಆಟಗಾರರು ವಿಫಲರಾದ ಕಾರಣ 293 ರಂಕಲ್ ಹಾಕಿ ಆಲ್ ಔಟ್ ಆಯಿತು. ಈ ಮೂಲಕ ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 291 ರನ್ ಲೀಡ್ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಜಮ್ಮು ಕಾಶ್ಮೀರ 4 ವಿಕೆಟ್ ನಷ್ಟಕ್ಕೆ 342 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಇನ್ನೊಂದು ಇನ್ನಿಂಗ್ಸ್ ಆಡಿಸುವಷ್ಟು ಸಮಯ ಇರದ ಕಾರಣ ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ಲೀಡ್ ಆಧಾರದ ಮೇಲೆ ಚಾಂಪಿಯನ್ನಾಗಿ ಹೊರಹೊಮ್ಮಿತು.

