HomeKarnataka15 ಮ್ಯೂಲ್ ಖಾತೆಗಳ ಮೂಲಕ ಕೋಟ್ಯಂತರ ರೂ. ವಂಚನೆ: ಮೂವರು ಆರೋಪಿಗಳು ಅರೆಸ್ಟ್

15 ಮ್ಯೂಲ್ ಖಾತೆಗಳ ಮೂಲಕ ಕೋಟ್ಯಂತರ ರೂ. ವಂಚನೆ: ಮೂವರು ಆರೋಪಿಗಳು ಅರೆಸ್ಟ್

ಶಿವಮೊಗ್ಗ: 15 ಮ್ಯೂಲ್ ಖಾತೆಗಳ ಮೂಲಕ ಕೋಟ್ಯಂತರ ರೂ. ವಂಚನೆ ಮಾಡಿದ್ದ ಮೂವರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂದಿಸಿದ್ದಾರೆ.

ಕಮಿಷನ್ ಆಸೆ ತೋರಿಸಿ ಬ್ಯಾಂಕ್ ಖಾತೆಯನ್ನು ಬಾಡಿಗೆ ಪಡೆದು, ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿ, ವಂಚಿಸುತ್ತಿದ್ದರು. ಶಿವಮೊಗ್ಗ ಸಿಇಎನ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.‌ ಶಿವಮೊಗ್ಗ ಶರಾವತಿ ನಗರದ ನಿವಾಸಿ ಜಗದೀಶ್(43), ಚಿಕ್ಕಮಗಳೂರಿನ ಅರ್ಷಾದ್(39) ಹಾಗೂ ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ(34) ಬಂಧಿತ ಆರೋಪಿಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಲ್ಸನ್ ಎಂಬುವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 2ರಂದು ಆರೋಪಿ ಜಗದೀಶನ ವಿರುದ್ಧ ದೂರು ನೀಡಿದ್ದರು. ಜಗದೀಶ್ ತನ್ನ ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಇದರಿಂದ ತಮ್ಮ ಖಾತೆ ಅಮಾನತು ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಾಗ ಜಗದೀಶ್ ಹಾಗೂ ಇತರೆ ಇಬ್ಬರು ಸೇರಿ ದೇಶದ ವಿವಿಧೆಡೆ ಸೈಬರ್ ವಂಚನೆ ಮಾಡಿ ಹಣವನ್ನು ವಿಲ್ಸನ್ ಅವರ ಖಾತೆಗೆ ವರ್ಗಾಯಿಸಿಕೊಂಡು ನಂತರ ತಮಗೆ ಬೇಕಾದ ಕಡೆ ವರ್ಗಾಯಿಸಿಕೊಂಡು ಹಣ ಗಳಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳ ಬಳಿ 15 ಮ್ಯೂಲ್ ಅಕೌಂಟ್​ಗಳು ಪತ್ತೆಯಾಗಿವೆ. ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು 82,00,15,712 ರೂ. ಗೂ ಹೆಚ್ಚು ಹಣ ವಂಚನೆಯಾಗಿದೆ. ಅಲ್ಲದೇ, ಇವರು ಬಳಸಿದ 15 ಮ್ಯೂಲ್ ಅಕೌಂಟ್​ಗಳಲ್ಲಿ ಒಟ್ಟು 14 ಕೋಟಿ 71 ಲಕ್ಷ 91 ಸಾವಿರದ 174 ರೂ. ಗೂ ಹೆಚ್ಚು ಹಣ ವರ್ಗಾವಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಬಳಸಿದ 2 ಮೊಬೈಲ್, 11 ಎಟಿಎಂ ಕಾರ್ಡ್, 9 QR ಕೋಡ್ ಸ್ಕ್ಯಾನರ್, 15 ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular