HomeBusiness9.34 ರೂ. ಸಾಲ, 66 ಪೈಸೆ ಚಿಲ್ಲರೆ ಬಗ್ಗೆ ಕೆನರಾ ಬ್ಯಾಂಕ್ ಸ್ಪಷ್ಟನೆ!

9.34 ರೂ. ಸಾಲ, 66 ಪೈಸೆ ಚಿಲ್ಲರೆ ಬಗ್ಗೆ ಕೆನರಾ ಬ್ಯಾಂಕ್ ಸ್ಪಷ್ಟನೆ!

ಹಾಸನ ಜಿಲ್ಲೆಯ ಸಕಲೇಶಪುರದ ಕೆನರಾ ಬ್ಯಾಂಕ್ ಸುದ್ದಿಯಲ್ಲಿದೆ. ಗ್ರಾಹಕರೊಬ್ಬರು ಬ್ಯಾಂಕ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 66 ಪೈಸೆ ಚಿಲ್ಲರೆ ವಾಪಸ್ ಕೊಡದ ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದ್ದರು.

ಈ ಪ್ರಕರಣದ ಬಗ್ಗೆ ಈಗ ಕೆನರಾ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದ್ದು, ‘ಆಗಿರುವ ಅನನುಕೂಲತೆಗೆ ನಾವು ವಿಷಾದಿಸುತ್ತೇವೆ’ ಎಂದು ಹೇಳಿದೆ.

‘ನಮ್ಮ ದಾಖಲೆಗಳ ಪ್ರಕಾರ, ನಿಮ್ಮ ಸಾಲದ ಖಾತೆಯಲ್ಲಿ (NPA ಸ್ಥಿತಿಯಲ್ಲಿದ್ದ) ₹9.34 ಬಾಕಿ ಇತ್ತು. ನೀವು ₹10 ಪಾವತಿಸಿದಾಗ, ಹೆಚ್ಚುವರಿ ಮೊತ್ತವನ್ನು ನಿಯಂತ್ರಕ ಮಾನದಂಡಗಳ (regulatory norms) ಪ್ರಕಾರ ನಿರ್ವಹಿಸಲಾಗಿದೆ’ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಕನಿಷ್ಠ ಚಲಾವಣಾ ಮೌಲ್ಯಕ್ಕಿಂತ ಕಡಿಮೆ ಇರುವ ಹಣವನ್ನು ನಗದು ರೂಪದಲ್ಲಿ ವಹಿವಾಟು ನಡೆಸಲು ಸಾಧ್ಯವಿಲ್ಲದ ಕಾರಣ, ಉಳಿದ ಮೊತ್ತವನ್ನು ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

‘ಗ್ರಾಹಕರ ಯಾವುದೇ ಹಣವು ಹೊಂದಾಣಿಕೆಯಾಗದೆ ಉಳಿದಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ದಯವಿಟ್ಟು ನಮಗೆ ನೇರ ಸಂದೇಶ ಕಳುಹಿಸಿ. ನಾವು ಯಾವಾಗಲೂ ನಿಮಗೆ ಉತ್ತಮ ಸೇವೆಗಳನ್ನು ನೀಡಲು ಬದ್ಧರಾಗಿದ್ದೇವೆ’ ಎಂದು ಪೋಸ್ಟ್ ಹಾಕಿದೆ.

ಘಟನೆಯ ವಿವರ: ಸುಮಾರು 20 ವರ್ಷಗಳಿಂದ ಸಕಲೇಶಪುರ ಕೆನರಾ ಬ್ಯಾಂಕಿನ ಗ್ರಾಹಕರೊಬ್ಬರು 50,000 ಬೆಳೆ ಸಾಲ ಪಡೆದಿದ್ದರು. ಆದರೆ ರೈತ 50,000 ಸಾಲ ವಾಪಸ್ ನೀಡಿದ ತಿಂಗಳುಗಳ ಬಳಿಕ ಬ್ಯಾಂಕ್‌ನಿಂದ ಕರೆ ಬಂದಿತ್ತು.

ನಿಮ್ಮ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಹೇಳಿತ್ತು. ಅಸಮಾಧಾನಗೊಂಡ ಗ್ರಾಕಹರು 10 ರೂ. ನೀಡಿ ಸಾಲ ವಾಪಸ್ ಮಾಡಿದ್ದರು. ಆದರೆ ಗ್ರಾಹಕರು ಬ್ಯಾಂಕ್ 66 ಪೈಸೆ ಚಿಲ್ಲರೆ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದರು.

9 ರೂ 34 ಪೈಸೆ ಸಾಲ ಕಟ್ಟುವಂತೆ ಅವರು ಹೇಳಿದ್ದರು. ಸಾಲ ಕ್ಲಿಯರ್ ಮಾಡಿದ್ದೇನೆ. ಬ್ಯಾಂಕ್ ಸಿಬ್ಬಂದಿ ನನಗೆ ಚಿಲ್ಲರೆ ವಾಪಸ್ ಕೊಟ್ಟಿಲ್ಲ. 66 ಪೈಸೆ ವಾಪಸ್​ ಕೊಡಿ, ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular