HomeEntertainmentಗಂಡನ ಮನೆಯಲ್ಲಿರಲು ನನಗೆ ಅವಕಾಶ ಕೊಡಿ ಎಂದು ಆದಿಲ್ ನಿವಾಸದ ಮುಂದೆ ನಟಿ ರಾಖಿ ಸಾವಂತ್...

ಗಂಡನ ಮನೆಯಲ್ಲಿರಲು ನನಗೆ ಅವಕಾಶ ಕೊಡಿ ಎಂದು ಆದಿಲ್ ನಿವಾಸದ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ….!

ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಜೊತೆ ವಿವಾಹವಾಗಿರುವ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್, ಆತ ನನ್ನನ್ನು ವಂಚಿಸಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದು, ಆತ ಈಗ ಪೊಲೀಸರ ವಶದಲ್ಲಿದ್ದಾನೆ.

ಈ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ರಾಖಿ ಸಾವಂತ್, ನ್ಯಾಯಾಧೀಶರು ಯಾವುದೇ ಕಾರಣಕ್ಕೂ ಆದಿಲ್ ಖಾನ್ ಗೆ ಜಾಮೀನು ನೀಡಬಾರದು. ನನಗೆ ನ್ಯಾಯ ಸಿಗಬೇಕು ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಗೋಳಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ರಾಖಿ ಸಾವಂತ್, ಮೈಸೂರಿನಲ್ಲಿರುವ ಆದಿಲ್ ಖಾನ್ ನಿವಾಸದ ಮುಂದೆ ಹೈಡ್ರಾಮ ಮಾಡಿದ್ದಾರೆ. ನನ್ನ ಗಂಡನ ಮನೆಯಲ್ಲಿರಲು ನನಗೆ ಅವಕಾಶ ನೀಡಿ ಎಂದು ಒಳ ಪ್ರವೇಶಿಸಲು ಯತ್ನಿಸಿದ್ದು, ಆದರೆ ಆದಿಲ್ ಖಾನ್ ಮನೆಯವರು ಬಾಗಿಲು ತೆರೆದಿಲ್ಲ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಅತ್ತು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular