HomeEntertainmentನಾಳೆ ಬಿಡುಗಡೆಯಾಗಲಿದೆ 'ರಾಜ ಮಾರ್ತಾಂಡ' ಟ್ರೈಲರ್

ನಾಳೆ ಬಿಡುಗಡೆಯಾಗಲಿದೆ ‘ರಾಜ ಮಾರ್ತಾಂಡ’ ಟ್ರೈಲರ್

ಚಿರಂಜೀವಿ ಸರ್ಜಾ ಅಭಿನಯದ ‘ರಾಜ ಮಾರ್ತಾಂಡ’ ಸಿನಿಮಾ ಅಕ್ಟೋಬರ್ 6 ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದ್ದು, ಮತ್ತೊಮ್ಮೆ ಚಿರಂಜೀವಿ ಸರ್ಜಾ ಅವರನ್ನು ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರಾಜ ಮಾರ್ತಂಡ ಚಿತ್ರತಂಡ ನಾಳೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಲು ನಿರ್ಧರಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆ ರಾಮನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಸೇರಿದಂತೆ ದೀಪ್ತಿ, ಡೈನಮಿಕ್ ಹೀರೋ ದೇವರಾಜ್ ಹಾಗೂ ಚಿಕ್ಕಣ್ಣ ತೆರೆ ಹಂಚಿಕೊಂಡಿದ್ದಾರೆ. ಶ್ರೀ ಮಹದೇಶ್ವರ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿವೇದಿತಾ, ಪ್ರಣವ್ ಗೌಡ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular