HomeEntertainmentಹುಟ್ಟುಹಬ್ಬದಂದೇ ಲಂಡನ್‌ನಲ್ಲಿ ಶೂಟಿಂಗ್‌: 61ನೇ ಬರ್ತ್‌ಡೇ ಆಚರಣೆಗೆ ಬ್ರೇಕ್ ಹಾಕಿದ ಶಾರೂಖ್!

ಹುಟ್ಟುಹಬ್ಬದಂದೇ ಲಂಡನ್‌ನಲ್ಲಿ ಶೂಟಿಂಗ್‌: 61ನೇ ಬರ್ತ್‌ಡೇ ಆಚರಣೆಗೆ ಬ್ರೇಕ್ ಹಾಕಿದ ಶಾರೂಖ್!

ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಅಭಿಮಾನಿಗಳಿಗೆ ನವೆಂಬರ್ 2 ಅಂದರೆ ಕೇವಲ ದಿನಾಂಕವಲ್ಲ, ಅದೊಂದು ದೊಡ್ಡ ಹಬ್ಬ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಮುಂಬೈನ ಪ್ರತಿಷ್ಠಿತ ನಿವಾಸ ‘ಮನ್ನತ್’ ಹೊರಗಡೆ ಬಂದು ಅಭಿಮಾನಿಗಳಿಗೆ ದರ್ಶನ ನೀಡುವುದು ಅಥವಾ ವಿಶೇಷವಾಗಿ ಆಯೋಜಿಸುವ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿಯಾಗುವುದು ಶಾರೂಖ್ ಅವರ ವಾಡಿಕೆ. ಆದರೆ ಈ ಬಾರಿ ಅಭಿಮಾನಿಗಳಿಗೆ ನಿರಾಸೆ ಎದುರಾಗುವ ಸಾಧ್ಯತೆಯಿದೆ.

ಶಾರೂಖ್ ಖಾನ್ ಈ ವರ್ಷ ತಮ್ಮ 61ನೇ ಜನ್ಮದಿನದಂದು ಮುಂಬೈನಲ್ಲಿ ಇರುವುದಿಲ್ಲ. ತಮ್ಮ ಮುಂಬರುವ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಶೂಟಿಂಗ್‌ಗಾಗಿ ಅವರು ಲಂಡನ್‌ನಲ್ಲಿ ಇರಲಿದ್ದು, ಹುಟ್ಟುಹಬ್ಬದಂದೇ ವಿಶೇಷ ಹಾಡಿನ ಚಿತ್ರೀಕರಣ ನಿಗದಿಯಾಗಿದೆ. ಹೀಗಾಗಿ ಈ ಬಾರಿಯ ವಾರ್ಷಿಕ ಫ್ಯಾನ್ ಮೀಟ್-ಆಂಡ್-ಗ್ರೀಟ್ ಕಾರ್ಯಕ್ರಮ ರದ್ದಾಗಿದೆ.

ವರ್ಷದ ಕೊನೆಯಲ್ಲಿ ಸಿಗಲಿದೆ ಭೇಟಿಯ ಅವಕಾಶ! ತಮ್ಮ ನೆಚ್ಚಿನ ನಟನನ್ನು ಹುಟ್ಟುಹಬ್ಬದಂದು ನೇರವಾಗಿ ಭೇಟಿಯಾಗಲು ಸಾಧ್ಯವಾಗದೆ ಅಭಿಮಾನಿಗಳು ನಿರಾಸೆಗೊಂಡಿದ್ದರೂ, ವರ್ಷದ ಕೊನೆಯಲ್ಲಿ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆಯಿದೆ. ಡಿಸೆಂಬರ್ 24 ರಂದು ‘ಕಿಂಗ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರದ ಅಂಗವಾಗಿ ಡಿಸೆಂಬರ್‌ ವೇಳೆಗೆ ಶಾರೂಖ್ ಖಾನ್ ಬೃಹತ್ ಅಭಿಮಾನಿಗಳ ಸಮಾವೇಶವನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಎರಡು ವರ್ಷಗಳಿಂದ ಶಾರೂಖ್ ‘ಮನ್ನತ್’ ನಿವಾಸದಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಅಲ್ಲಿ ದರ್ಶನ ನೀಡದೆ, ಮುಂಬೈನ ಬಾಲ್ ಗಂಧರ್ವ್ ರಂಗ್ ಮಂದಿರದಲ್ಲಿ ಖಾಸಗಿಯಾಗಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದರು. ಆದರೆ ಈ ಬಾರಿ ವಿದೇಶದಲ್ಲಿ ಶೂಟಿಂಗ್ ಇರುವುದರಿಂದ ಮುಂಬೈನಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರದಲ್ಲಿ ಶಾರೂಖ್ ಜೊತೆಗೆ ದೀಪಿಕಾ ಪಡುಕೋಣೆ, ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮತ್ತು ಅನಿಲ್ ಕಪೂರ್ ನಟಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular