HomeLatest Newsಮಂತ್ರಾಲಯಕ್ಕೆ ಸರ್ಕಾರಿ ಬಸ್: ಭಕ್ತರಿಗೆ ಮಹತ್ವದ ಅಪ್‌ಡೇಟ್‌

ಮಂತ್ರಾಲಯಕ್ಕೆ ಸರ್ಕಾರಿ ಬಸ್: ಭಕ್ತರಿಗೆ ಮಹತ್ವದ ಅಪ್‌ಡೇಟ್‌

ರಾಯಚೂರು-ಮಂತ್ರಾಲಯ ನಡುವೆ ರಾತ್ರಿ 9 ಗಂಟೆಯ ಬಳಿಕ ಸರ್ಕಾರಿ ಬಸ್ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಹೊರಡಿಸಿರುವ ಪ್ರಕಟಣೆಯನ್ನು ಲಗತ್ತಿಸಿದ್ದಾರೆ.

ಈ ಪ್ರಕಟಣೆ ರಾತ್ರಿ 9 ಗಂಟೆಯ ನಂತರ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್-X ಖಾತೆಯಲ್ಲಿ ಪ್ರಕಟವಾದ ಸುದ್ದಿಯ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾತ್ರಿ 9 ಗಂಟೆಯ ನಂತರ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್‌ ಸೇವೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್-X ಖಾತೆಯಲ್ಲಿ ಪ್ರಕಟವಾದ ಸುದ್ದಿಯನ್ನು ಪರಿಶೀಲಿಸಲಾಯಿತು ಎಂದು ಹೇಳಿದ್ದಾರೆ.

ಪ್ರಸ್ತುತ ರಾಯಚೂರು-ಮಂತ್ರಾಲಯಕ್ಕೆ ರಾಯಚೂರು ಬಸ್ ನಿಲ್ದಾಣದಿಂದ ಬೆಳಗಿನ ಜಾವ 3:15 ರಿಂದ ರಾತ್ರಿ 23:30 ಗಂಟೆಯ ವರೆಗೆ ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆಗಳು ಸೇರಿದಂತೆ ಒಟ್ಟು 122 ಸುತ್ತುವಳಿಗಳು ಕಾರ್ಯಾಚರಣೆಯಲ್ಲಿರುತ್ತವೆ.

ಸದರಿ ಸಾರಿಗೆಗಳ ಪ್ರಯೋಜನವನ್ನು ಭಕ್ತಾಧಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಪ್ರಸ್ತುತ 9 ಗಂಟೆಯ ನಂತರ ರಾಯಚೂರು ಬಸ್ ನಿಲ್ದಾಣದಿಂದ ಕಾರ್ಯಾಚರಣೆಯಲ್ಲಿರುವ ಬಸ್‌ಗಳ ವಿವರ ಇಲ್ಲಿದೆ.

  • 122/ 123. ನಾನ್ ಎಸಿ ಸ್ಲೀಪರ್. ರಾಯಚೂರಿನಿಂದ ಹೊರಡುವ ಸಮಯ 21:21
  • 46/ 47. ವೇಗದೂತ. ರಾಯಚೂರಿನಿಂದ ಹೊರಡುವ ಸಮಯ 21:30
  • 59/ 60. ನಾನ್ ಎಸಿ ಸ್ಲೀಪರ್. ರಾಯಚೂರಿನಿಂದ ಹೊರಡುವ ಸಮಯ 21:30
  • 15/ 16. ಅಂಬಾರಿ ಡ್ರೀಮ್‌ ಕ್ಲಾಸ್. ರಾಯಚೂರಿನಿಂದ ಹೊರಡುವ ಸಮಯ 21:45
  • 98/ 99. ಕಲ್ಯಾಣ ರಥ. ರಾಯಚೂರಿನಿಂದ ಹೊರಡುವ ಸಮಯ 23:30

ಸಾರ್ವಜನಿಕ ಪ್ರಯಾಣಿಕರು ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ರಾಯಚೂರು ಘಟಕ-1ರಿಂದ ಅನುಸೂಚಿ ಸಂಖ್ಯೆ:50 ರಲ್ಲಿ ರಾಯಚೂರಿನಿಂದ ಮಂತ್ರಾಲಯಕ್ಕೆ ಬೆಳಗಿನ ಜಾವ 4 ಗಂಟೆಗೆ ಹಾಗೂ ದೇವದುರ್ಗ ಘಟಕದ ಅನುಸೂಚಿ ಸಂಖ್ಯೆ 46/ 47 ರಲ್ಲಿ ದೇವದುರ್ಗ-ರಾಯಚೂರು-ಮಂತ್ರಾಲಯ ಮಾರ್ಗದಲ್ಲಿ ರಾತ್ರಿ 21:30ಕ್ಕೆ ರಾಯಚೂರು ಬಸ್ ನಿಲ್ದಾಣ ನಿರ್ಗಮಿಸಿ ಮಂತ್ರಾಲಯಕ್ಕೆ ಕಾರ್ಯಾಚರಣೆಯಾಗುವಂತೆ ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.

ಸದರಿ ಸಾರಿಗೆಗಳ ಪ್ರಯೋಜನವನ್ನು ಸಾರ್ವಜನಿಕ ಪ್ರಯಾಣಿಕರು ಹಾಗೂ ಭಕ್ತಾಧಿಗಳು ಪಡೆದುಕೊಳ್ಳಬಹುದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular