HomeKarnatakaBig News: ಬೆಂಗಳೂರು ನಗರಕ್ಕೆ ಕೇಂದ್ರದಿಂದ ಬಿಗ್ ಗಿಫ್ಟ್

Big News: ಬೆಂಗಳೂರು ನಗರಕ್ಕೆ ಕೇಂದ್ರದಿಂದ ಬಿಗ್ ಗಿಫ್ಟ್

ಕೇಂದ್ರ ಸರ್ಕಾರ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ವಿದ್ಯುತ್ ವಾಹನಗಳ ಉತ್ತೇಜನಕ್ಕಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗ ಈ ಯೋಜನೆ ಅಡಿಯಲ್ಲಿಯೇ ಕರ್ನಾಟಕದ ರಾಜಧಾನಿ ಬೆಂಗಳೂರು ನಗರಕ್ಕೆ ಬಿಗ್ ಗಿಫ್ಟ್ ನೀಡಲಾಗಿದೆ.

ಪ್ರಧಾನಮಂತ್ರಿ ವಿದ್ಯುತ್ ಚಾಲನ ಕ್ರಾಂತಿ (ಪಿಎಂ-ಇ-ಡ್ರೈವ್) ಯೋಜನೆಯಡಿಯಲ್ಲಿ ಬಸ್, ಇ-ದ್ವಿಚಕ್ರ ವಾಹನ, ಇ-ತ್ರಿಚಕ್ರ ವಾಹನ, ಇ-ಆಂಬ್ಯುಲೆನ್ಸ್‌ ಮತ್ತು ಇ-ಟ್ರಕ್‌ಗಳು ಸೇರಿದಂತೆ ವಿದ್ಯುತ್ ವಾಹನಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಈಗ ಪಿಎಂ-ಇ-ಡ್ರೈವ್ ಯೋಜನೆಯ ಅನ್ವಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಎಲೆಕ್ಟ್ರಿಕ್ ಬಸ್‌ ಕೊಡುಗೆಯಾಗಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇದೆ, ‘ಶಕ್ತಿ’ ಯೋಜನೆ ಬಳಿಕ ಬಸ್ ಏರಲು ಹರಸಾಹಸ ಪಡಬೇಕು ಎಂಬ ದೂರುಗಳಿಗೆ ಶೀಘ್ರವೇ ಮುಕ್ತಿ ದೊರೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಷ್ಟು ಬಸ್‌ಗಳು?: ಪಿಎಂ-ಇ-ಡ್ರೈವ್ ಯೋಜನೆಯಡಿ ಬೆಂಗಳೂರು ನಗರಕ್ಕೆ 1750 ಎಲೆಕ್ಟ್ರಿಕ್ ಬಸ್ ಹಂಚಿಕೆ ಮಾಡಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಪ್ಪಂದದ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡುವ ಈ ಬಸ್‌ಗಳು ನಗರದ ಬಸ್‌ಗಳ ಕೊರತೆಯನ್ನು ತುಂಬಲಿವೆ.

ಮೊದಲ ಹಂತದಲ್ಲಿ ಕರ್ನಾಟಕದ ವಿವಿಧ ನಗರಕ್ಕೆ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರು ನಗರಕ್ಕೆ 1750 ಬಸ್‌ಗಳು ಬರಲಿವೆ. ಅತಿ ಹೆಚ್ಚಿನ ಬೇಡಿಕೆ ಇರುವ ಮಾರ್ಗ, ಹೊಸ ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಲು ಬಿಎಂಟಿಸಿಗೆ ಸಹಾಯಕವಾಗಲಿದೆ.

ಬಿಎಂಟಿಸಿಯಲ್ಲಿ 6,800ಕ್ಕೂ ಅಧಿಕ ಬಸ್‌ಗಳಿವೆ. ಆದರೆ ಕೆಲವು ರಿಪೇರಿಯಲ್ಲಿವೆ. ಬಿಎಂಟಿಸಿ ತನ್ನ ಜಾಲವನ್ನು ವಿಸ್ತರಣೆ ಮಾಡಿರುವ ಕಾರಣ ಬೆಂಗಳೂರು ನಗರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಬಸ್‌ಗಳ ಅಗತ್ಯವಿದೆ.

ಈಗ ಕೇಂದ್ರದಿಂದ 1750 ಎಲೆಕ್ಟ್ರಿಕ್ ಬಸ್‌ಗಳು ಬರುವ ಕಾರಣ ನಗರದಲ್ಲಿ ಬಸ್‌ಗಳ ಕೊರತೆ ಕಡಿಮೆಯಾಗಲಿದೆ. ಸಿಇಎಸ್ಎಲ್ ಸಂಸ್ಥೆ ಟೆಂಡರ್ ಮೂಲಕ ಈ ಬಸ್‌ಗಳನ್ನು ಏಕಾ ಮೊಬಿಲಿಟಿ ಹಂಚಿಕೆ ಮಾಡಲಿದೆ. ಬೆಂಗಳೂರು ನಗರದಲ್ಲಿ ಬಸ್ ಓಡಿಸುವ ಹೊಣೆ ಇದರದ್ದಾಗಿದೆ.

ಈ ಹೊಸ ಬಸ್​​ಗಳ ಮೂಲಕ ಬಿಎಂಟಿಸಿ ಹಲವು ಹಳೆಯ ಬಸ್​​ಗಳನ್ನು ತೆಗೆದು ಹಾಕಬಹುದು. ಹೊಸ ಮಾರ್ಗ, ಬಹು ಬೇಡಿಕೆಯ ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಬಹುದು.

ಈ ಒಪ್ಪಂದದ ಅನ್ವಯ ಬಸ್​ಗಳಿಗೆ ಚಾಲಕರು ಕಂಪನಿ ಕಡೆಯಿಂದ ಬರುತ್ತಾರೆ. ಬಿಎಂಟಿಸಿ ಕಂಡಕ್ಟರ್‌ ನೇಮಕ ಮಾಡಬೇಕಿದೆ. ಈ ಬಸ್ ಒಂದು ಕಿ.ಮೀ.ಗೆ 45 ರಿಂದ 50 ರೂ. ವೆಚ್ಚವಾಗಲಿದೆ. ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್​ಗಳು 12 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಯಲ್ಲಿ ಸಂಚಾರವನ್ನು ನಡೆಸಲಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular