HomeLatest Newsಹಾರರ್ ಪ್ರೇಮಿಗಳಿಗೆ ಗುಡ್ ನ್ಯೂಸ್: ತಮನ್ನಾ ಭಾಟಿಯಾ ನಟನೆಯ ರಾಗಿಣಿ 3 ಚಿತ್ರಕ್ಕೆ ಅದ್ಧೂರಿ ಚಾಲನೆ!

ಹಾರರ್ ಪ್ರೇಮಿಗಳಿಗೆ ಗುಡ್ ನ್ಯೂಸ್: ತಮನ್ನಾ ಭಾಟಿಯಾ ನಟನೆಯ ರಾಗಿಣಿ 3 ಚಿತ್ರಕ್ಕೆ ಅದ್ಧೂರಿ ಚಾಲನೆ!

ಬಾಲಿವುಡ್‌ನ ಅತ್ಯಂತ ಯಶಸ್ವಿ ಹಾರರ್ ಥ್ರಿಲ್ಲರ್ ಚಿತ್ರಗಳ ಸಾಲಿಗೆ ಸೇರುವ ರಾಗಿಣಿ ಸರಣಿಯ ಮೂರನೇ ಭಾಗದ ಚಿತ್ರೀಕರಣ ಈಗ ಅಧಿಕೃತವಾಗಿ ಆರಂಭಗೊಂಡಿದೆ. ಹೊಸ ತಾರಾಗಣ ಹಾಗೂ ವಿಭಿನ್ನ ತಾಂತ್ರಿಕ ತಂಡದೊಂದಿಗೆ ಈ ಸಿನಿಮಾ ಸೆಟ್ಟೇರಿದ್ದು, ಚಿತ್ರದ ಕಥೆಯ ಬಗ್ಗೆ ಚಿತ್ರತಂಡ ತೀವ್ರ ಕುತೂಹಲ ಕಾಯ್ದುಕೊಂಡಿದೆ. ಈ ನಡುವೆ ಶೂಟಿಂಗ್ ಸೆಟ್‌ನಿಂದ ಹೊರಬಿದ್ದಿರುವ ಮೊದಲ ಅಪ್‌ಡೇಟ್ ಅಭಿಮಾನಿಗಳಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ.

ಖ್ಯಾತ ನಟಿ ತಮನ್ನಾ ಭಾಟಿಯಾ ರಾಗಿಣಿ 3 ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದ ಮೊದಲ ದಿನದ ಸಂಭ್ರಮವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರದ ಮೊದಲ ದಿನದ ಮುಹೂರ್ತದ ಕ್ಲಾಪ್ ಬೋರ್ಡ್ ಹಿಡಿದು ನಿಂತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅವರು ಈ ಹೊಸ ಜರ್ನಿಗೆ ಚಾಲನೆ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ.

ಈ ಸಿನಿಮಾದಲ್ಲಿ ತಮನ್ನಾ ಅವರೊಂದಿಗೆ ಆಯುಷ್ ಶರ್ಮಾ, ಜುನೈದ್ ಖಾನ್ ಮತ್ತು ನರ್ಗಿಸ್ ಫಖ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದಿನ ಭಾಗಗಳಿಗಿಂತ ಭಿನ್ನವಾಗಿ ಈ ಬಾರಿ ಶಶಾಂಕ ಘೋಷ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಫ್ರಾಂಚೈಸಿಗೆ ಹೊಸ ಆಯಾಮ ನೀಡಲು ಮುಂದಾಗಿದ್ದಾರೆ. ಹಾರರ್ ಕಥಾಹಂದರದ ಜೊತೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಸಸ್ಪೆನ್ಸ್ ಈ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಾಜಿ ಮೋಷನ್ ಪಿಕ್ಚರ್ಸ್, ಟಿಪ್ಸ್ ಫಿಲ್ಮ್ಸ್ ಮತ್ತು ಜೈ ಹೋ ಮೀಡಿಯಾ ವೆಂಚರ್ಸ್ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿವೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಮರ್ ಬುಟಾಲಾ, ಕುಮಾರ್ ತೌರಾನಿ ಮತ್ತು ಗಿರೀಶ್ ಕುಮಾರ್ ಬಂಡವಾಳ ಹೂಡಿದ್ದು, ಸುಧಾಕರ್ ರೆಡ್ಡಿ ಯಕ್ಕಂತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ರೋಚಕ ಅಪ್‌ಡೇಟ್‌ಗಳನ್ನು ನೀಡಲು ಚಿತ್ರತಂಡ ಯೋಜಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular