ಬೆಂಗಳೂರು: ದಾಖಲೆಯ ಸುದೀರ್ಘ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕೊಟ್ಟಿದ್ದು ಚೊಂಬು. ಇದೊಂದು ನಿರಾಶಾದಾಯಕ ಶೂನ್ಯ ಬಜೆಟ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬಜೆಟ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಬಜೆಟ್ ನಲ್ಲಿ ಪ್ರಾದೇಶಿಕ ಅಸಮಾನತೆ ಸರಿ ಮಾಡಲು ಯಾವುದೇ ವಿಶೇಷ ಅನುದಾನವಿಲ್ಲ, ಎಸ್ಸಿ ಸಚಿವರು ರಾಜೀನಾಮೆ ಕೊಡ್ತೀವಿ ಅಂತ ಹೊರಟಿದ್ದಾರೆ ಎಂದರು.
ಹಾಲಿಗೆ ಪ್ರೋತ್ಸಾಹಧನದ ಸುದ್ದಿಯೇ ಇಲ್ಲ, ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಯಥೇಚ್ಛವಾಗಿ ಭರಪೂರ ಅನುದಾನ ಕೊಟ್ಟಿದ್ದಾರೆ. ಹೊಸದಾಗಿ ತೆರಿಗೆ ಘೋಷಣೆ ಮಾಡಿಲ್ಲ. ಇನ್ಮೇಲೆ ಮಾರಿ ಹಬ್ಬ ಇದೆ. ಒಟ್ಟಾರೆ ಈ ಸರ್ಕಾರ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ದುಸ್ಥಿತಿಗೆ ತಂದಿಟ್ಟಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದ್ದಾರೆ ಎಂದು ಗುಡುಗಿದರು.

