HomeKarnatakaALERT : ಸಾರ್ವಜನಿಕರೇ ಎಚ್ಚರ : ಗ್ಯಾಸ್ ಬುಕಿಂಗ್ ಹೆಸರಲ್ಲಿ ನಕಲಿ ಲಿಂಕ್ ಕ್ಲಿಕ್ ಮಾಡಿದ್ರೆ...

ALERT : ಸಾರ್ವಜನಿಕರೇ ಎಚ್ಚರ : ಗ್ಯಾಸ್ ಬುಕಿಂಗ್ ಹೆಸರಲ್ಲಿ ನಕಲಿ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ.!

ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಕೊರತೆಯ ಆತಂಕವನ್ನು ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಈಗ ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. “ತಕ್ಷಣವೇ ಸಿಲಿಂಡರ್ ಬುಕ್ ಮಾಡಿ” ಎಂಬ ಆಕರ್ಷಕ ಸಂದೇಶಗಳೊಂದಿಗೆ ಬರುವ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಜೀವನದ ಗಳಿಕೆ ಕ್ಷಣಾರ್ಧದಲ್ಲಿ ಖಾಲಿಯಾಗಲಿದೆ. ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ದೇಶದ ಹಲವೆಡೆ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವದ ಆತಂಕ ಮನೆಮಾಡಿರುವ ಬೆನ್ನಲ್ಲೇ, ಇದನ್ನು ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸ ರೀತಿಯಲ್ಲಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು   ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ವಂಚನೆ ನಡೆಯುವುದು ಹೇಗೆ?

ಸದ್ಯದ ಗ್ಯಾಸ್ ಕೊರತೆಯ ಗೊಂದಲವನ್ನು ಬಳಸಿಕೊಳ್ಳುತ್ತಿರುವ ಸೈಬರ್ ಕಳ್ಳರು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಕಲಿ ಜಾಹೀರಾತು: ಸೋಶಿಯಲ್ ಮೀಡಿಯಾದಲ್ಲಿ “ತಕ್ಷಣವೇ ಸಿಲಿಂಡರ್ ಡೆಲಿವರಿ ನೀಡಲಾಗುವುದು” ಅಥವಾ “ಹೆಚ್ಚುವರಿ ಸಿಲಿಂಡರ್ ನೀಡಲಾಗುವುದು” ಎಂಬ ಆಕರ್ಷಕ ಜಾಹೀರಾತುಗಳನ್ನು ನೀಡುತ್ತಾರೆ.

ಫಿಶಿಂಗ್ ಲಿಂಕ್‌ಗಳು: ವಾಟ್ಸಾಪ್ ಮತ್ತು ಎಸ್‌ಎಂಎಸ್ ಮೂಲಕ ನಕಲಿ ವೆಬ್‌ಸೈಟ್ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಇವು ಅಧಿಕೃತ ಗ್ಯಾಸ್ ಕಂಪನಿಗಳ ವೆಬ್‌ಸೈಟ್‌ನಂತೆಯೇ ಇರುತ್ತವೆ.

ಮುಂಗಡ ಪಾವತಿ: ಅರ್ಜೆಂಟ್ ಆಗಿ ಸಿಲಿಂಡರ್ ಬೇಕಿದ್ದರೆ ಆನ್‌ಲೈನ್‌ನಲ್ಲಿ ಮುಂಗಡವಾಗಿ ಹಣ ಪಾವತಿಸುವಂತೆ ನಂಬಿಸುತ್ತಾರೆ. ಒಮ್ಮೆ ನೀವು ಆ ಲಿಂಕ್ ಕ್ಲಿಕ್ ಮಾಡಿ ಹಣ ಪಾವತಿಸಿದರೆ ಅಥವಾ ನಿಮ್ಮ ವಿವರ ನೀಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದು ಖಚಿತ.

ಪೊಲೀಸರ ಸೂಚನೆಗಳು:

  1. ಲಿಂಕ್ ಕ್ಲಿಕ್ ಮಾಡಬೇಡಿ: ಅಪರಿಚಿತರು ಕಳುಹಿಸುವ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.
  2. ಅಧಿಕೃತ ಮಾರ್ಗ ಬಳಸಿ: ಸಿಲಿಂಡರ್ ಬುಕಿಂಗ್ ಅಥವಾ ಆನ್‌ಲೈನ್ ಪಾವತಿಗಾಗಿ ಕೇವಲ ಗ್ಯಾಸ್ ಕಂಪನಿಗಳ (Indane, HP, Bharatgas) ಅಧಿಕೃತ ಆಪ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಿ.
  3. ರಹಸ್ಯ ಮಾಹಿತಿ ಹಂಚಿಕೊಳ್ಳಬೇಡಿ: ಆಕರ್ಷಕ ಆಫರ್‌ಗಳಿಗೆ ಮರುಳಾಗಿ ನಿಮ್ಮ ಬ್ಯಾಂಕ್ ಖಾತೆ ವಿವರ, OTP ಅಥವಾ UPI PIN ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  4. ವಂಚನೆಯಾದರೆ ಏನು ಮಾಡಬೇಕು?: ಒಂದು ವೇಳೆ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular