ಬೆಂಗಳೂರು: ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ. ಸ್ಟಡಿ ಹಾಲಿಡೆಗೆ ಬ್ರೇಕ್ ಹಾಕಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಮಹತ್ವದ ಆದೇಶ ನೀಡಿದೆ.
ಪಿಯು ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ಬಳಿಕ ನೀಡಲಾಗುತ್ತಿದ್ದ ಸ್ಟಡಿ ಹಾಲಿಡೆ ಸ್ಥಗಿತಗೊಳಿಸಲಾಗಿದ್ದು, ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂದು ಆದೇಶ ಹೊರಡಿಸಲಾಗಿದೆ. ಪಿಯು ಫಲಿತಾಂಶ ಸುಧಾರಣೆಗೆ ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಟಡಿ ಹಾಲಿಡೆ ಬದಲಾಗಿ ಗ್ರೂಪ್ ಸ್ಟಡಿ ಮಾಡಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪರೀಕ್ಷೆ ಮುಗಿಯುವವರೆಗೂ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳನ್ನು ಮುಖ್ಯಪರೀಕ್ಷೆಗೆ ತಯಾರಿ ಮಾಡಬೇಕು. ಉಪನ್ಯಾಸಕರ ನೇತೃತ್ವದಲ್ಲಿಯೇ ಪರೀಕ್ಷೆಗೆ ತಯಾರಿ ಮಾಡಬೇಕು. ಪರೀಕ್ಷೆ ಮುಗಿಯುವವರೆಗೂ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು.
ಇಷ್ಟು ವರ್ಷ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದ ಬಳಿಕ ಮುಖ್ಯ ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಸ್ಟಡಿ ಹಾಲಿಡೆ ನೀಡಲಾಗುತ್ತಿತ್ತು. ಆದರೆ ಈವರ್ಷದಿಂದ ಸ್ಟಡಿ ಹಾಲಿಡೆ ಇರುವುದಿಲ್ಲ. ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಸ್ಟಡಿ ಹಾಲಿಡೆಗೆ ಬ್ರೇಕ್ ಹಾಕಲಾಗಿದೆ. ಫೆಬ್ರವರಿ 26ರವರೆಗೆ ಕಾಲೇಜು ನಡೆಸಲು ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

