HomeKarnatakaಶ್ರೀಗಂಧ ಮರ ಕಳವು ತಡೆ, ಬೆಳೆ ಉತ್ತೇಜನಕ್ಕೆ ಮಹತ್ವದ ಹೆಜ್ಜೆ

ಶ್ರೀಗಂಧ ಮರ ಕಳವು ತಡೆ, ಬೆಳೆ ಉತ್ತೇಜನಕ್ಕೆ ಮಹತ್ವದ ಹೆಜ್ಜೆ

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಶ್ರೀಗಂಧ ಪ್ರಮುಖ ಕಚ್ಚಾ ವಸ್ತುವಾಗಿದೆ. ಶ್ರೀಗಂಧ ಬೆಳೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ(ಕೆಎಸ್‌ಡಿಎಲ್) ಮಹತ್ವದ ಹೆಜ್ಜೆ ಇಟ್ಟಿದೆ. ಶ್ರೀಗಂಧ ಮರ, ಗಿಡಗಳ ಕಳ್ಳತನ ತಡೆಗೆ ಕ್ರಮ ಕೈಗೊಂಡಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದ ಸುಗಂಧ ಕಾಪಾಡಲು ಕೆಎಸ್‌&ಡಿಎಲ್‌ ನ ದಿಟ್ಟ ಹೆಜ್ಜೆ

ಮೈಸೂರ್ ಸ್ಯಾಂಡಲ್ ಸೋಪ್‌ ನ ಪರಿಮಳದ ಹಿಂದೆ ಕರ್ನಾಟಕದ ಶ್ರೀಗಂಧದ ಶಕ್ತಿ ಇದೆ.  ಶ್ರೀಗಂಧವನ್ನು ಉಳಿಸಿ, ಬೆಳೆಸಿ, ರೈತರ ಭವಿಷ್ಯವನ್ನು ಭದ್ರಗೊಳಿಸುವ ಮಹತ್ವದ ಹೆಜ್ಜೆಯನ್ನು ಕೆಎಸ್‌&ಡಿಎಲ್ ಇಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀಗಂಧದ ಮರ/ಗಿಡಗಳ ಕಳ್ಳತನ ತಡೆಯುವುದು ಕೂಡ ದೊಡ್ಡ ಸವಾಲಾಗಿದ್ದು, ಇದರ ತಡೆಗೆ ಯಾರೇ ತಂತ್ರಜ್ಞಾನದ ನೆರವು ನೀಡಿದರೂ ಅದನ್ನು ಸ್ವೀಕರಿಸಲು ಸಂಸ್ಥೆ ಸಿದ್ಧ. ಪರಿಣಾಮಕಾರಿ ತಂತ್ರಜ್ಞಾನ ಆಯ್ಕೆಯಾದರೆ ಅದರ ಅನುಷ್ಠಾನದ ಸಂಪೂರ್ಣ ವೆಚ್ಚವನ್ನೇ ಕೆಎಸ್‌&ಡಿಎಲ್ ಭರಿಸಲಿದೆ ಎಂದು ತಿಳಿಸಿದ್ದಾರೆ.

ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂದು ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಸನ್ಮಾನಿಸಲಾಗುವುದು.  ಜೊತೆಗೆ ಶ್ರೀಗಂಧ ಚೋರರನ್ನು ಬಂಧಿಸುವಲ್ಲಿ ಸಾಧನೆ ಮಾಡಿದ ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾಹಿತಿ ನೀಡಿದ ಸಾರ್ವಜನಿಕರನ್ನು ಗೌರವಿಸಲಾಗುವುದು. ಇದು ಕೃಷಿ, ಕೈಗಾರಿಕೆ ಮತ್ತು ಕಾನೂನು ವ್ಯವಸ್ಥೆ ಒಂದಾಗಿ ಕೆಲಸ ಮಾಡುವ ಅಪೂರ್ವ ಮಾದರಿ.

ಕಳೆದ ಮೂರು ವರ್ಷಗಳಲ್ಲಿ 174.5 ಮೆಟ್ರಿಕ್ ಟನ್ ಶ್ರೀಗಂಧ ಖರೀದಿಸಿ ರೈತರ ಖಾತೆಗೆ ₹6.08 ಕೋಟಿ ನೇರ ವರ್ಗಾವಣೆ ಮಾಡಿರುವುದು, ಶ್ರೀಗಂಧ ಬೆಳೆ ರೈತರಿಗೆ ಎಷ್ಟು ದೊಡ್ಡ ಆರ್ಥಿಕ ಶಕ್ತಿಯಾಗಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular