HomeLifestyleಬ್ರೇಕ್ ಫಾಸ್ಟ್ ಗೆ ಧಿಢೀರನೆ ತಯಾರಿಸಿ 'ಅವಲಕ್ಕಿ' ಪುಳಿಯೊಗರೆ

ಬ್ರೇಕ್ ಫಾಸ್ಟ್ ಗೆ ಧಿಢೀರನೆ ತಯಾರಿಸಿ ‘ಅವಲಕ್ಕಿ’ ಪುಳಿಯೊಗರೆ

ಕೆಲವೇ ನಿಮಿಷಗಳಲ್ಲಿ ತಯಾರಾಗುವ ತಿಂಡಿ ಎಂದರೆ ಅದು ಪುಳಿಯೋಗರೆ. ಬೆಳಗ್ಗೆ ಯಾವುದೇ ಟೆನ್ಶನ್ ಇಲ್ಲದೆ ಈ ತಿಂಡಿಯನ್ನು ಸುಲಭವಾಗಿ ಮಾಡಬಹುದು.

ಹಾಗೇ ಅವಲಕ್ಕಿಯಿಂದ ತಯಾರಾಗುವ ಪುಳಿಯೋಗರೆ ಹೇಗೆ ಮಾಡಬೇಕು ಅಂತ ತಿಳಿಬೇಕಾ. ಇಲ್ಲಿದೆ ಅದರ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು
ಮಿಡಿಯಂ ಅವಲಕ್ಕಿ – 1/2 ಕೆಜಿ
ಪುಳಿಯೋಗರೆ ಪುಡಿ ಅಥವಾ ಗೊಜ್ಜು
ಎಣ್ಣೆ ಅಗತ್ಯಕ್ಕೆ ತಕ್ಕಷ್ಟು
ಕರಿಬೇವು 1 ಕಡ್ಡಿ
ಶೇಂಗಾ ಬೀಜ
ಸ್ವಲ್ಪ ಅರಿಶಿಣ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ
ಅವಲಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಯಲು ಬಿಡಿ. ಬಾಣೆಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸ್ವಲ್ಪ ಸಾಸಿವೆ, ಶೇಂಗಾಬೀಜ, ಕರಿಬೇವಿನಸೊಪ್ಪು ಹಾಗೂ ಅರಿಶಿಣ ಹಾಕಿ ಬಾಡಿಸಿ. ಇದಕ್ಕೆ ಪುಳಿಯೋಗರೆ ಪುಡಿ ಅಥವಾ ಗೊಜ್ಜನ್ನು ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಬಾಡಿಸಿ. ಬಳಿಕ ಇದಕ್ಕೆ ಮೊದಲೆ ನೆನೆಸಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಅದಕ್ಕೆ ಬೇಕಾದರೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಬಹುದು.

For Latest News Updates, Join Our Whatsapp Community🚩
RELATED ARTICLES

Most Popular