HomeAstroಫೆ. 11ರಂದು ಅಸ್ತನಾಗುವ ಶನಿ: ಈ ಉಪಾಯ ಮಾಡಿದರೆ ತರಲಿದೆ ಲಾಭ

ಫೆ. 11ರಂದು ಅಸ್ತನಾಗುವ ಶನಿ: ಈ ಉಪಾಯ ಮಾಡಿದರೆ ತರಲಿದೆ ಲಾಭ

ನ್ಯಾಯ ದೇವ ಶನಿ ಫೆಬ್ರವರಿ 11ರಂದು ಕುಂಭ ರಾಶಿಯಲ್ಲಿ  ಅಸ್ತನಾಗಲಿದ್ದಾನೆ. ಸ್ವರಾಶಿ ಕುಂಭದಲ್ಲಿ ಆತ ಅಸ್ತನಾಗುವ ಕಾರಣ ವಿಶೇಷ ಪರಿಣಾಮಗಳನ್ನು ನಾವು ಕಾಣಬಹುದು. ಶನಿ 30 ವರ್ಷಗಳ ನಂತ್ರ ಕುಂಭ ರಾಶಿಯಲ್ಲಿ ಅಸ್ತನಾಗಲಿದ್ದು, ಮಾರ್ಚ್‌ 18ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ.

ಶನಿ ಅಸ್ತನಾದ ಸಮಯದಲ್ಲಿ ನೀವು ಮಾಡುವ ಕೆಲ ಕೆಲಸಗಳು ನಿಮ್ಮ ವೃತ್ತಿ, ವ್ಯಾಪಾರ, ನೌಕರಿಯಲ್ಲಿ ಲಾಭ ತರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ನೌಕರಿಯಲ್ಲಿ ಧನ ಪ್ರಾಪ್ತಿ : ನೌಕರಿಯಲ್ಲಿ ಹೆಚ್ಚಿನ ಲಾಭ ಆಗಬೇಕು ಎನ್ನುವವರು ಶನಿ ಅಸ್ತನಾದ ಮೇಲೆ ಶನಿವಾರ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಅಲ್ಲದೆ ಮೂರು ಬಾರಿ ಅಶ್ವತ್ಥ ಮರವನ್ನು ಪ್ರದಕ್ಷಣೆ ಹಾಕಿ. ಅಲ್ಲದೆ ನಿರ್ಗತಿಕರಿಗೆ ನಾಣ್ಯವನ್ನು ದಾನದ ರೂಪದಲ್ಲಿ ನೀಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಾಪಾರದಲ್ಲಿ ಧನ ಲಾಭ : ವ್ಯಾಪಾರಸ್ಥರು ಲಾಭ ಪಡೆಯಬೇಕು ಎಂದ್ರೆ ಶನಿವಾರ ಬೆಳಿಗ್ಗೆ ಅಶ್ವತ್ಥ ಮರಕ್ಕೆ ನೀರನ್ನು ಹಾಕಬೇಕು. ಅಲ್ಲದೆ ಅದೇ ದಿನ ಸಂಜೆ ಮರದ ಕೆಳಗೆ ಏಕ ಮುಖವಿರುವ ದೀಪವನ್ನು ಹಚ್ಚಬೇಕು. ಅಲ್ಲಿಯೇ ಕುಳಿತು ಶನಿ ಚಾಲೀಸಾವನ್ನು ಓದಬೇಕು. ಇದಾದ್ಮೇಲೆ ನೀವು ಬಡವರಿಗೆ ಆಹಾರವನ್ನು ದಾನದ ರೂಪದಲ್ಲಿ ನೀಡಬೇಕು. ಬೆಲ್ಲ, ತುಪ್ಪ, ಕಪ್ಪು ಎಳ್ಳು, ಬೆಚ್ಚಗಿನ ಬಟ್ಟೆಯನ್ನು ನೀವು ದಾನದ ರೂಪದಲ್ಲಿ ನೀಡಬಹುದು.

ಹಣ ಉಳಿತಾಯ : ಶನಿವಾರ ಒಂದು ಲೋಹದ ನಾಣ್ಯವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆಯ ಕತ್ತಲೆಯ ಜಾಗದಲ್ಲಿ ಇಡಿ. ಆ ದಿನ ಮಾಂಸ, ಮದ್ಯವನ್ನು ಸೇವನೆ ಮಾಡಬೇಡಿ.

For Latest News Updates, Join Our Whatsapp Community🚩
RELATED ARTICLES

Most Popular