HomeEntertainmentಪ್ರಥಮ್ ಜೊತೆ ನಟ ದರ್ಶನ್ ಫ್ಯಾನ್ಸ್ ನಿಂದ ಕಿರಿಕ್: ದೂರು ನೀಡಿದರೆ ಕಂಬಿ ಎಣಿಸಬೇಕಾಗುತ್ತೆ ಎಂದು...

ಪ್ರಥಮ್ ಜೊತೆ ನಟ ದರ್ಶನ್ ಫ್ಯಾನ್ಸ್ ನಿಂದ ಕಿರಿಕ್: ದೂರು ನೀಡಿದರೆ ಕಂಬಿ ಎಣಿಸಬೇಕಾಗುತ್ತೆ ಎಂದು ಎಚ್ಚರಿಕೆ

ಬೆಂಗಳೂರು: ಬಿಗ್ ಬಾಸ್ ವಿನ್ನರ್, ನಟ ಪ್ರಥಮ್ ಜೊತೆ ದರ್ಶನ್ ಫ್ಯಾನ್ಸ್ ಕಿರಿಕ್ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಪ್ರಥಮ್ ಗೆ ಅಶ್ಲೀಲವಾಗಿ ನಿಂದಿಸಿ, ಜೈ ಡಿಬಾಸ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ನಟ ಪ್ರಥಮ್ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿದ್ದಾರೆ.

ಪ್ರಥಮ್ ಹೋಟೆಲ್ ಗೆ ತೆರಳಿದ್ದ ವೇಳೆ ಏಕಾಏಕಿ ಬಂದ ದರ್ಶನ್ ಫ್ಯಾನ್ಸ್, ಗಲಾಟೆ ಮಾಡಲಾರಂಭಿಸಿದ್ದಾರೆ. ಜೈ ಡಿಬಾಸ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಹಲ್ಲೆ ನಡೆಸು ಯತ್ನಿಸಿದ್ದಾರೆ. ಈ ವೇಳೆ ಹೋಟೆಲ್ ಬೌನ್ಸ್ ರ್ ಗಳು ಆ ಗೂಂಡಾಗಳನ್ನು ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರಥಮ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆ ಬಗ್ಗೆ ನಾನು ಕಂಪ್ಲೇಂಟ್ ಕೊಡಲು ಮುಂದಾದೆ. ಆದರೆ ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಮನವಿ ಮಾಡಿದ ಕಾರಣ ಕಂಪ್ಲೇಂಟ್ ಕೊಡದೇ ಸುಮ್ಮನಾದೆ. ನಿಮ್ಮಪಾಡಿಗೆ ನೀವಿರಿ. ದರ್ಶನ್ ಸರ್ ಅವರಪಾಡಿಗೆ ಪಾಡಿಗೆ ಅವರಿದ್ದಾರೆ. ದರ್ಶನ್ ಫ್ಯಾನ್ಸ್ ಮಿನಿ ಗೂಂಡಾಗಳಂತೆ ವರ್ತಿಸಿದ್ದಾರೆ, ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೂರು ನೀಡಿದರೆ ಕಂಬಿ ಎಣಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular