ಕಾರವಾರ: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆಯಲ್ಲಿ ಧ್ವಜ ಹಾರಿಸಿದ ಮೊಹಮ್ಮದ್ ರಜಾ ಶೇಖ್(29) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಂಕೋಲಾ ಪಟ್ಟಣದ ವಿಠಲ್ ಘಾಟ್ ನಿವಾಸಿಯಾಗಿರುವ ರಜಾ ಶೇಖ್ ವಿರುದ್ಧ 196/1(ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ.
ಅಂಕೋಲದ ಕೇಣಿ ಕ್ರಾಸ್ ಬಂಡಿ ಬಜಾರ್ ರಸ್ತೆಯಲ್ಲಿ ಘಟನೆ ನಡೆದಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ರಜಾ ಶೇಖ್ ಪ್ಯಾಲೇಸ್ತೀನ್ ದ್ವಜವನ್ನು ಹಾರಿಸಿದ್ದ ಹಿನ್ನೆಲೆಯಲ್ಲಿ ಧ್ವಜವನ್ನು ವಶಕ್ಕೆ ಪಡೆದು ಮೆರವಣಿಗೆಗೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು.

