HomeIndia5,100 ಕೋಟಿ ರೂ. ವೆಚ್ಚ: ಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ ವೇ ವಿಶೇಷತೆಗಳು

5,100 ಕೋಟಿ ರೂ. ವೆಚ್ಚ: ಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ ವೇ ವಿಶೇಷತೆಗಳು

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗುಜರಾತ್‌ ರಾಜ್ಯ ಪ್ರವಾಸದಲ್ಲಿದ್ದಾರೆ. ವಿವಿಧ ಯೋಜನೆಗಳನ್ನು ಅವರು ಲೋಕಾರ್ಪಣೆ ಮಾಡಲಿದ್ದು, ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.

ನರೇಂದ್ರ ಮೋದಿ ಸಂಜೆ 4 ಗಂಟೆಗೆ ವಾವ್-ಥರಾಡ್‌ಗೆ ಭೇಟಿ ನೀಡಲಿದ್ದಾರೆ. 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ನೆರವೇರಿಸಲಿದ್ದಾರೆ.

ಈ ಯೋಜನೆಗಳಲ್ಲಿ ವಿದ್ಯುತ್, ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಆರೋಗ್ಯ, ನಗರಾಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಮಗಾರಿಗಳು ಸೇರಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ ವೇ: ಈ ಯೋಜನೆಗಳಲ್ಲಿ ಪ್ರಮುಖವಾದದ್ದು ಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ ವೇ ಯೋಜನೆಯಾಗಿದೆ. ಇದು ಸುಮಾರು 5,100 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆಯಾಗಿದೆ.

ಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ ವೇ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ, ಧೋಲೆರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ (ಡಿಎಸ್ಐಆರ್) ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇತರ ಯೋಜನೆಗಳ ಮಾಹಿತಿ

  • ನರೇಂದ್ರ ಮೋದಿ 4-ಪಥದ ಇಡಾರ್-ಬಡೋಲಿ ಬೈಪಾಸ್ ವಿಭಾಗದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  • ರಾಷ್ಟ್ರೀಯ ಹೆದ್ದಾರಿ 754ಕೆʼಗೆ ಸೇರಿರುವ ಧೋಲವಿರಾ-ಮೌವಾನಾ-ವೌವಾ-ಸಂತಾಲ್ಪುರ್ ವಿಭಾಗವನ್ನು (ಪ್ಯಾಕೇಜ್-2) ಸುಸಜ್ಜಿತ ದ್ವಿಪಥ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  • ಈ ಯೋಜನೆಗಳು ಹೆದ್ದಾರಿ ಮೂಲಸೌಕರ್ಯವನ್ನು ಬಲಪಡಿಸುತ್ತವೆ, ಧೋಲವಿರಾದಂತಹ ಪ್ರವಾಸೋದ್ಯಮ ತಾಣಗಳು ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತವೆ, ಸರಕುಸಾಗಣೆ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ.
  • ಗಾಂಧಿನಗರ-ಕೋಬಾ-ವಿಮಾನ ನಿಲ್ದಾಣ ರಸ್ತೆಯ ಭೈಜಿಪುರ ಜಂಕ್ಷನ್‌ನಲ್ಲಿರುವ ಮೇಲ್ಸೇತುವೆ ಸೇರಿದಂತೆ ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  • ಗಾಂಧಿನಗರ-ಕೋಬಾ-ಅರೋದ್ರಮ್ ರಸ್ತೆಯ ಪಿಡಿಪಿಯು ಜಂಕ್ಷನ್‌ ನಲ್ಲಿರುವ ಮೇಲ್ಸೇತುವೆಯನ್ನು ಸಹ ಉದ್ಘಾಟಿಸಲಿದ್ದಾರೆ.
  • ಗಾಂಧಿನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿತ್ಯ 140,000ಕ್ಕೂ ಹೆಚ್ಚು ವಾಹನಗಳ ದಟ್ಟಣೆಯನ್ನು ನಿರ್ವಹಿಸುತ್ತದೆ. ಮೇಲ್ಸೇತುವೆಯು ‘ಸಿಎಚ್-0ʼ ಜಂಕ್ಷನ್‌ನಿಂದ ಅಹಮದಾಬಾದ್ ಮತ್ತು ಗಾಂಧಿನಗರ ನಡುವಿನ ವಿಮಾನ ನಿಲ್ದಾಣಕ್ಕೆ ಸುಗಮ ಮತ್ತು ತಡೆರಹಿತ ಸಂಚಾರವನ್ನು ಖಚಿತಪಡಿಸುತ್ತದೆ.
  • ಕನಾಲುಸ್ – ಜಾಮ್ ನಗರ ಜೋಡಿ ಮಾರ್ಗ ಯೋಜನೆ (28 ಕಿ.ಮೀ), ರಾಜ್‌ಕೋಟ್ – ಕನಾಲುಸ್ ಜೋಡಿ ಮಾರ್ಗ ಯೋಜನೆʼಯ ಒಂದು ಭಾಗ (111.20 ಕಿ.ಮೀ) ಹಾಗೂ ಗಾಂಧಿಧಾಮ – ಆದಿಪುರ್ ವಿಭಾಗದ (10.69 ಕಿ.ಮೀ) ನಾಲ್ಕು ಹಳಿ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
  • ಹಿಮ್ಮತ್ ನಗರ-ಖೇದಬ್ರಹ್ಮ ಗೇಜ್ ಪರಿವರ್ತನೆ ಯೋಜನೆಯನ್ನು (54.83 ಕಿ.ಮೀ) ಉದ್ಘಾಟಿಸಲಿದ್ದಾರೆ. ಇದು ಈ ಪ್ರದೇಶದಲ್ಲಿ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸಂಚಾರವನ್ನು ಸುಧಾರಿಸುತ್ತದೆ. ಖೇದಬ್ರಹ್ಮ-ಹಿಮ್ಮತ್ ನಗರ-ಅಸರ್ವಾ ರೈಲು ಸೇವೆಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular