ನವದೆಹಲಿ: ಕೇಂದ್ರ ಸರ್ಕಾರವು ಏಪ್ರಿಲ್-ಜೂನ್ 2026ರ ತ್ರೈಮಾಸಿಕ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಬಡ್ಡಿದರಗಳನ್ನು ಪ್ರಕಟಿಸಿದೆ. ಸತತ ಎಂಟನೇ ಬಾರಿಗೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಹಣಕಾಸು ಸಚಿವಾಲಯ ನಿರ್ಧರಿಸಿದೆ.
ಇದರಿಂದಾಗಿ ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪತ್ರ (NSC) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತಹ ಜನಪ್ರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಕುಟುಂಬಗಳಿಗೆ ಸ್ಥಿರವಾದ ಆದಾಯ ಮುಂದುವರಿಯಲಿದೆ.
ಯಥಾಸ್ಥಿತಿ ಮುಂದುವರಿಕೆ
2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ (ಏಪ್ರಿಲ್ 1 ರಿಂದ ಜೂನ್ 30, 2026) ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ. ಜನವರಿ-ಮಾರ್ಚ್ 2026ರ ತ್ರೈಮಾಸಿಕದಲ್ಲಿ ಇದ್ದ ಬಡ್ಡಿದರಗಳೇ ಈ ಅವಧಿಯಲ್ಲೂ ಅನ್ವಯವಾಗಲಿವೆ ಎಂದು ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಹೊಸ ಬಡ್ಡಿದರ ಪಟ್ಟಿ (ಏಪ್ರಿಲ್-ಜೂನ್ 2026)
ಉಳಿತಾಯ ಯೋಜನೆಯ ಹೆಸರುವಾರ್ಷಿಕ ಬಡ್ಡಿದರ
(%)ಸುಕನ್ಯಾ ಸಮೃದ್ಧಿ ಯೋಜನೆ (SSY)8.2%
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)8.2%
ರಾಷ್ಟ್ರೀಯ ಉಳಿತಾಯ ಪತ್ರ (NSC)7.7%
ಕಿಸಾನ್ ವಿಕಾಸ್ ಪತ್ರ (KVP)7.5%
ಪೋಸ್ಟ್ ಆಫೀಸ್ 5 ವರ್ಷದ ಟೈಮ್ ಡೆಪಾಸಿಟ್7.5%
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS)7.4%
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)7.1%
ಪೋಸ್ಟ್ ಆಫೀಸ್ 3 ವರ್ಷದ ಟೈಮ್ ಡೆಪಾಸಿಟ್7.1%
ಪೋಸ್ಟ್ ಆಫೀಸ್ 2 ವರ್ಷದ ಟೈಮ್ ಡೆಪಾಸಿಟ್7.0%
ಪೋಸ್ಟ್ ಆಫೀಸ್ 1 ವರ್ಷದ ಟೈಮ್ ಡೆಪಾಸಿಟ್6.9%
ಪೋಸ್ಟ್ ಆಫೀಸ್ 5 ವರ್ಷದ ಆರ್‌ಡಿ (RD)6.7%
ಪೋಸ್ಟ್ ಆಫೀಸ್ ಉಳಿತಾಯ ಖಾತೆ (Savings)4.0%
ಹೂಡಿಕೆದಾರರ ಮೇಲೆ ಇದರ ಪ್ರಭಾವವೇನು?
1.ಸ್ಥಿರತೆ ಇದೆ, ಆದರೆ ಹೆಚ್ಚಿನ ಲಾಭವಿಲ್ಲ:
ಈಗಾಗಲೇ ಈ ಯೋಜನೆಗಳಲ್ಲಿ ಹಣ ತೊಡಗಿಸಿರುವವರಿಗೆ ಯಾವುದೇ ಆತಂಕವಿಲ್ಲ, ಅವರ ಆದಾಯ ಸ್ಥಿರವಾಗಿರುತ್ತದೆ. ಆದರೆ ಹೊಸದಾಗಿ ಹೂಡಿಕೆ ಮಾಡುವವರಿಗೆ ಬಡ್ಡಿದರ ಏರಿಕೆಯ ಲಾಭ ಸದ್ಯಕ್ಕೆ ಸಿಗುವುದಿಲ್ಲ.
2.ಹಣದುಬ್ಬರದ ಸವಾಲು:
ಪ್ರಸ್ತುತ ಹಣದುಬ್ಬರವು ಶೇ. 4-6ರ ಆಸುಪಾಸಿನಲ್ಲಿದೆ. ಉದಾಹರಣೆಗೆ, ಪಿಪಿಎಫ್ (PPF) ನೀಡುವ ಶೇ. 7.1 ಬಡ್ಡಿಯಲ್ಲಿ ಹಣದುಬ್ಬರವನ್ನು ಕಳೆದರೆ, ಹೂಡಿಕೆದಾರರಿಗೆ ಸಿಗುವ ನಿವ್ವಳ ಲಾಭ ಕೇವಲ ಶೇ. 1-3ರಷ್ಟು ಮಾತ್ರ.
3.ತೆರಿಗೆ ಉಳಿತಾಯದ ದೊಡ್ಡ ಲಾಭ:
ಬಡ್ಡಿದರ ಸ್ಥಿರವಾಗಿದ್ದರೂ, ಕೆಲವು ಯೋಜನೆಗಳು ತೆರಿಗೆ ರಿಯಾಯಿತಿಯ ಕಾರಣದಿಂದ ಇಂದಿಗೂ ಆಕರ್ಷಕವಾಗಿವೆ.PPF ಹೂಡಿಕೆ ಮಾಡುವ ಹಣ, ಬರುವ ಬಡ್ಡಿ ಮತ್ತು ಮೆಚ್ಯೂರಿಟಿ ಹಣ ಮೂರೂ ತೆರಿಗೆ ಮುಕ್ತ (EEE Category).ಸುಕನ್ಯಾ ಸಮೃದ್ಧಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇದು ಅತ್ಯುತ್ತಮ ತೆರಿಗೆ ಮುಕ್ತ ಯೋಜನೆಯಾಗಿದೆ.
NSC ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.

