ಬೆಂಗಳೂರು (ಮಾರ್ಚ್ 31, 2026): ಚಿನ್ನದ ಪ್ರಿಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಯುದ್ಧದ ಪ್ರಭಾವದಿಂದ ಇಳಿಕೆಯಾಗುತ್ತಾ ಬಂದಿದ್ದ ಚಿನ್ನದ ಬೆಲೆ, ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೂ ನೇರ ಪ್ರಭಾವ ಬೀರಿದ್ದು ಹೂಡಿಕೆದಾರರು ಮತ್ತೆ ಚಿನ್ನದತ್ತ ಮುಖ ಮಾಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಸ್ಥಿರತೆಯನ್ನು ಕಂಡುಕೊಳ್ಳುತ್ತಿದ್ದಂತೆ, ಸುರಕ್ಷಿತ ಹೂಡಿಕೆಯಾಗಿ ಎಲ್ಲರೂ ಬಂಗಾರದ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ರಾತ್ರೋರಾತ್ರಿ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಶಾಕ್ ನೀಡಿದೆ. ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿ ಬೆಲೆಯೂ ಕೂಡ ಗಗನಕ್ಕೇರಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ
24 ಕ್ಯಾರೆಟ್ ಚಿನ್ನ ₹14,826 – ₹14,842
22 ಕ್ಯಾರೆಟ್ ಚಿನ್ನ ₹13,590 – ₹13,606
18 ಕ್ಯಾರೆಟ್ ಚಿನ್ನ ₹11,119
ಬೆಳ್ಳಿ ₹245 – ₹250
ಭಾರತದ ಪ್ರಮುಖ ನಗರದಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)
ಚೆನ್ನೈ – ₹14,913
ಮುಂಬೈ – ₹14,929
ದೆಹಲಿ – ₹14,944
ಕೊಲ್ಕತ್ತಾ – ₹14,929
ಬೆಂಗಳೂರು – ₹14,929
ಹೈದರಾಬಾದ್ – ₹14,929
ಕೇರಳ – ₹14,929
ಪುಣೆ – ₹14,929
ವಡೋದರಾ – ₹14,934
ಅಹಮದಾಬಾದ್ – ₹14,934

