HomeLatest NewsBREAKING : T-20 ವಿಶ್ವಕಪ್‌'ನಲ್ಲಿ ‘ಟೀಮ್ ಇಂಡಿಯಾ’ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ನಿರ್ಧಾರ.!

BREAKING : T-20 ವಿಶ್ವಕಪ್‌’ನಲ್ಲಿ ‘ಟೀಮ್ ಇಂಡಿಯಾ’ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ನಿರ್ಧಾರ.!

2026ರ ಟಿ 20 ವಿಶ್ವಕಪ್ ಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅತ್ಯಂತ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ಹೌದು, ಟಿ20 ವಿಶ್ವಕಪ್ ನಲ್ಲಿ ‘ಟೀಮ್ ಇಂಡಿಯಾ’ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಈ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸಲು (Boycott) ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ.ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗ್ರೂಪ್ ಸ್ಟೇಜ್ ಪಂದ್ಯವನ್ನು ತಮ್ಮ ತಂಡ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ.ರಾಜಕೀಯ ಕಾರಣಗಳು ಮತ್ತು ಇತ್ತೀಚಿನ ಬೆಳವಣಿಗೆಗಳಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7 ರಿಂದ ಆರಂಭವಾಗಲಿದೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಶ್ರೀಲಂಕಾಕ್ಕೆ ಪ್ರಯಾಣಿಸಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಪಾಕಿಸ್ತಾನದ ‘ಗ್ರೂಪ್ ಎ’ ಪಂದ್ಯಗಳೆಲ್ಲವೂ ಶ್ರೀಲಂಕಾದಲ್ಲೇ ನಡೆಯಲಿವೆ. ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನವು ಭಾರತದಲ್ಲಿ ಆಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಐಸಿಸಿ ಈ ಪಂದ್ಯವನ್ನು ತಟಸ್ಥ ವೇದಿಕೆಯಾದ ಕೊಲಂಬೊಗೆ ಸ್ಥಳಾಂತರಿಸಿತ್ತು. ಆದರೆ, ಈಗ ಪಾಕಿಸ್ತಾನವು ಕೇವಲ ಈ ಒಂದು ಪಂದ್ಯವನ್ನು ಮಾತ್ರ ಬಹಿಷ್ಕರಿಸಲು ನಿರ್ಧರಿಸಿದೆ. ಇದರಿಂದ ಅವರು ಟೂರ್ನಿಯಿಂದ ಹೊರಬೀಳುವುದಿಲ್ಲ, ಬದಲಾಗಿ ಕೇವಲ ಒಂದು ಪಂದ್ಯದಿಂದ ಮಾತ್ರ ಹಿಂದೆ ಸರಿಯಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತಕ್ಕೆ ಸಿಗಲಿದೆ 2 ಪಾಯಿಂಟ್ಸ್: ಪಾಕಿಸ್ತಾನದ ಈ ನಿರ್ಧಾರದಿಂದ ಭಾರತಕ್ಕೆ ಆಡದೆಯೇ 2 ಪಾಯಿಂಟ್ಸ್ ಲಭಿಸಲಿದೆ (Match Forfeit). ಆದರೆ, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ದೊಡ್ಡ ಆರ್ಥಿಕ ಹೊಡೆತ ನೀಡಲಿದೆ. ಏಕೆಂದರೆ ಭಾರತ-ಪಾಕ್ ಪಂದ್ಯವು ವಿಶ್ವದ ಅತಿ ಹೆಚ್ಚು ವೀಕ್ಷಿಸಲ್ಪಡುವ ಮತ್ತು ಹಣ ಗಳಿಸುವ ಪಂದ್ಯವಾಗಿದೆ. ಈ ನಿರ್ಧಾರದಿಂದ ಐಸಿಸಿ ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ಭಾರಿ ನಷ್ಟವಾಗಲಿದೆ.

ಬಹಿಷ್ಕಾರದ ಕಾರಣ: ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ದ್ವಿಪಕ್ಷೀಯ ಸರಣಿಗಳ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಐಸಿಸಿ ಮೇಲೆ ಒತ್ತಡ: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕದನ ಎಂದೇ ಕರೆಯಲ್ಪಡುವ ಭಾರತ-ಪಾಕ್ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೇಲೆ ಒತ್ತಡ ಹೇರುವುದು ಪಾಕಿಸ್ತಾನದ ತಂತ್ರವಾಗಿದೆ.

ಪರಿಣಾಮ: ಒಂದು ವೇಳೆ ಪಾಕಿಸ್ತಾನ ಈ ಪಂದ್ಯವನ್ನು ಬಹಿಷ್ಕರಿಸಿದರೆ, ಅದು ವಿಶ್ವಕಪ್ನ ಪ್ರಸಾರ ಹಕ್ಕು ಮತ್ತು ಆರ್ಥಿಕ ಲಾಭದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular